ಬಿಎಂಐಸಿಪಿ

ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ ಇದು ಬೆಂಗಳೂರು ಮತ್ತು ಮೈಸೂರು ನಡುವಿನ ೧೧೧ ಕಿ.ಮೀ ಎಕ್ಸ್ಪ್ರೆಸ್ವೇ, ೪೧ ಕಿ.ಮೀ ಪೆರಿಫಿರಲ್ ರಸ್ತೆ ಮತ್ತು ೯.೮ ಕಿ.ಮೀ ಬೆಂಗಳೂರಿನಿಂದ ಎಕ್ಸ್ಪ್ರೆಸ್ವೇಗೆ ಸಂಪರ್ಕಿಸುವ ಲಿಂಕ್ ರಸ್ತೆ. ಇದು ೫ ಪಟ್ಟಣಗಳನ್ನೊಳಗೊಂಡ (ಟೌನ್‌ಶಿಪ್) ಇದು ಸಂಯೋಜಿತ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್. ಈ ೫ ಪಟ್ಟಣಗಳಲ್ಲಿ ಕಾರ್ಪೋರೇಟ್ ಸೆಂಟರ್, ವಾಣಿಜ್ಯ ಕೇಂದ್ರ (ಬಿಡದಿ ಹತ್ತಿರ); ಕೈಗಾರಿಕಾ ಕೇಂದ್ರ, ಪರಂಪರೆ ಕೇಂದ್ರ (ರಾಮನಗರ); ಇಕೊ-ಟೂರಿಸ್ಟ್ ಕೇಂದ್ರ (ಶ್ರೀರಂಗಪಟ್ಟಣ). ಈ ಚೌಕಟ್ಟು ಒಪ್ಪಂದವನ್ನು (ಎಫ್‌ಡ್ಬ್ಲ್ಯೂಎ) ಮೆ. ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿ. ಮತ್ತು ಸಕಾರದ ನಡುವೆ ದಿನಾಂಕ ೩೦/೪/೧೯೯೭ ರಂದು ಮಾಡಲಾಯಿತು. ಆ ಎಫ್‌ಡ್ಬ್ಲ್ಯೂಎ ಪ್ರಕಾರ ಒಟ್ಟಾರೆ ೨೦೧೯೩ ಎಕರೆ ಭೂಮಿಯನ್ನು ಮೆ.ನೈಸ್ ಹಸ್ತಾತಂರಿಸಬೇಕು ಅದರಲ್ಲಿ ೬೯೯೯ ಎಕರೆ ಟೋಲ್ ರೋಡ್ ಮತ್ತು ೧೩೧೯೪ ಎಕರೆಗಳನ್ನು ಪಟ್ಟಣಗಳಿಗೆ ನಿಗದಿ ಮಾಡಲಾಗಿತ್ತು. ಒಟ್ಟಾರೆ ೨೦೧೯೩ ಎಕರೆಗಳಲ್ಲಿ ೬೯೫೬ ಎಕರೆ ಸರ್ಕಾರದ ಭೂಮಿ ಮತ್ತು ೧೩೨೩೭ ಎಕರೆಗಳು ಖಾಸಗಿ ಭೂಮಿಯಾಗಿತ್ತು. ಸ್ವಾಧೀನಕ್ಕೆ ಮತ್ತು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಕಂಪನಿಯ ಭರಿಸಬೇಕಾಗಿತ್ತು.

ಬಿಎಂಐಸಿಪಿಗೆ ಭೂ ಸ್ವಾಧೀನ: ಎಫ್‌ಡ್ಬ್ಲ್ಯೂಎ ವಿಧಿ ೫ ರ ಪ್ರಕಾರ ಭೂ ಸ್ವಾಧೀನವನ್ನು ಸರ್ಕಾರ ಅಥವಾ ಸರ್ಕಾರದ ಕ್ರಮಗಳ ಮೂಲಕ ಮಾಡಬೇಕಾಗಿತ್ತು. ಕೆಐಎಡಿಬಿ ಮತ್ತು ಕಂಪನಿ ದಿನಾಂಕ ೧೪/೧೦/೧೯೯೮ ರಂದು ಬೇಕಾಗಿರುವ ಭೂಮಿಯನ್ನು ಸ್ವಾಧೀನ ಮಾಡಲು ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದದ ಪ್ರಕಾರ ೨೩,೮೪೬ ಎಕರೆಗಳನ್ನು ಸ್ವಾಧೀನಪಡಿಸಿಕೊಂಡು ಮೆ. ನೈಸ್‌ಗೆ ಹಸ್ತಾಂತರ ಮಾಡಬೇಕಾಗಿತ್ತು. ಈ ಯೋಜನೆಗೆ, ಸುಮಾರು ೨೬೪೮೮ ಎಕರೆಗಳನ್ನು ಕೆಐಎಡಿ ಕಾಯಿದೆ ಕಲಂ ೩(೧) ರ ಪ್ರಕಾರ; ೧೯೩೬೧ ಎಕರೆಗಳನ್ನು ಕಲಂ ೧(೩) ರ ಪ್ರಕಾರ; ೧೮೨೧೮ ಎಕರೆಗಳನ್ನು ಕಲಂ ೨೮(೧) ರ ಪ್ರಕಾರ ಮತ್ತು ೪೮೧೦ ಎಕರೆಗಳನ್ನು ಕಲಂ ೨೮(೪) ರ ಪ್ರಕಾರ ಸೂಚನೆ ಮಾಡಲಾಯಿತು.
ಇದುವರೆಗೂ, ೭೫೧೯ ಎಕರೆಗಳು ಕಂಪನಿಗೆ ಹಸ್ತಾಂತರ ಮಾಡಲಾಗಿದೆ (೫೦೦೦ ಎಕರೆಗಳು ಸರ್ಕಾರದ ಭೂಮಿ ಮತ್ತು ೨೧೫೯ ಎಕರೆಗಳಷ್ಟು ಖಾಸಗಿ ಭೂಮಿ). ಸುಮಾರು ೧೬೯೬ ಎಕರೆ ಖಾಸಗಿ ಭೂಮಿ ಮತ್ತು ೨ ಎಕರೆ ಸರ್ಕಾರಿ ಭೂಮಿಗೆ ಕ್ರಯ ಪತ್ರ ಮಾಡಲಾಗಿದೆ.