ಕಾರ್ಯವಿಧಾನಗಳು

ಏಕ ಘಟಕ ಸಂಕೀರ್ಣಕ್ಕಾಗಿ ಭೂಸ್ವಾಧೀನದ ಕಾರ್ಯವಿಧಾನ

  • ಪ್ರಾಯೋಜಕರ ಮೂಲಕ ತಮ್ಮ ಉದ್ದೇಶಿ ಯೋಜನೆಗಳಿಗಾಗಿ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಭೂಮಿಯನ್ನು ಗುರುತಿಸುವುದು.
  • ರಾಜ್ಯ ಮೇಲ್ಚಟ್ಟದ ಅನುಮೋದನಾ ಸಮಿತಿ (SHLCC) ರಾಜ್ಯ ಏಕಗವಾಕ್ಷಿ ಅನುಮೋದನಾ ಸಮಿತಿ ಮುಂತಾದ ಸೂಕ್ತ ಸಮಿತಿಗಳಿಂದ ಯೋಜನೆಗಳ ಅನುಮೋದನೆ.
  • ಅವಶ್ಯವಿರುವ ಕಾಗದ ಪತ್ರಗಳು ಮತ್ತು ಜಮೀನಿನ ವಿವರಣೆಗಳನ್ನು ಒಳಗೊಂಡ ಕೆಐಎಡಿಬಿ ಅರ್ಜಿಯನ್ನು ಭರ್ತಿಮಾಡುವುದು.
  • SHLCC/SLSWCC ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸುವುದಕ್ಕೆ ಮುಂಚಿತವಾಗಿ ಪ್ರಾಯೋಜಕರು ರೈತರು ಅಥವ ಆ ಭೂ ಮಾಲೀಕರಿಂದ ಒಪ್ಪಿಗೆ ಪತ್ರವನ್ನು ಪಡೆದುಕೊಳ್ಳುವುದು.
  • ಪ್ರಯೋಜಕರು ಕೆಐಎಡಿಬಿಯೊಂದಿಗೆ ರೂ.೨೦೦ ಮುಖಬೆಲೆಯ ಪತ್ರದಲ್ಲಿ ಸ್ವಾಧೀನ ಪ್ರಕ್ರಿಯೆಗೆ ಮುಂಚಿತವಾಗಿ ಕರಾರು ಮಾಡಿಕೊಳ್ಳುವುದು.
  • ಪ್ರಾಯೋಜಕರು ಭೂಮಿಯ ಬೆಲೆಯ ಸರಾಸರಿ ಶೇ ೪೦ರಷ್ಟು ಮೊತ್ವನ್ನು ಮತ್ತು ಕಛೇರಿಯ ವೆಚ್ಚವನ್ನು ಸರ್ಕಾರಕ್ಕೆ ಅಧಿಸೂಚನೆಯ ಕರಡು ಪ್ರತಿ ನೀಡುವುದಕ್ಕಿಂತ ಮುಂಚಿತವಾಗಿ ಠೇವಣಿ ಮಾಡಬೇಕು.
  • ಕರ್ನಾಟಕ ಗೆಜೆಟಿಯರ್ ೧೯೯೬ರಲ್ಲಿನ ಪ್ರಾಥಮಿಕ ಅಧಿಸೂಚನೆ ಪ್ರಕಟಣೆ ಅಂತರ್ಗತ, ಕೆಐಎಡಿಬಿ ಕಾಯಿದೆಯ ಪರಿಚ್ಛೇದ 1(3), 3(1) ಮತ್ತು 28(1)
  • ವಿಶೇಷ ಭೂಸ್ವಾಧೀನ ಅಧಿಕಾರಿಯಿಂದ ಕಾಯಿದೆಯ ಪರಿಚ್ಛೇದ 28(2)ರ ಅಂತರ್ಗತ ತಕರಾರುಗಳಿದ್ದಲ್ಲಿ ಅದನ್ನು ೩೦ ದಿನಗಳೊಳಗೆ ಸೂಚಿಸುವಂತೆ ಭೂಮಾಲೀಕರಿಗೆ ಸೂಚನೆ ನೀಡಬೇಕು.
  • ವಿಶೇಷ ಭೂಸ್ವಾಧೀನ ಅಧಿಕಾರಿಗಳಿಂದ ತಕರಾರುಗಳನ್ನು ಪರಿಚ್ಛೇದ 28(3)ರ ಅನ್ವಯ ಆಲಿಸಿ ಪರಿಹಾರ ನೀಡುವುದು.
  • ಕೆಐಎಡಿ ಕಾಯಿದೆ, ೧೯೬೬ರ ಅಂತರ್ಗತ ಪರಿಛೇದ 28(4)ರ ಅನ್ವಯ ಜಂಟಿಕಯಾಗಿ ಭೂಮಿಯನ್ನು ಅಳತೆ ಮಾಡಿ ಅಧಿಸೂಚನೆಯ ಅಂತಿಮ ಕರಡನ್ನು ಸಿದ್ಧಪಡಿಸುವುದು.
  • ಸರ್ಕಾರದ ಅಧಿಸೂಚನೆಯ ಅಂತಿಮ ಕರಡನ್ನು ಕಳಿಸುವುದಕ್ಕಿಂತ ಮುಂಚಿತವಾಗಿ ಪ್ರಾಯೋಜಕರು ಭೂಮಿಯ ಬೆಲೆಯ ಉಳಿದ ಶೇ. ೬೦ರ ಮೊತ್ತವನ್ನು ಪಾವತಿಸುವುದು
  • ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದ ನಂತರ, ಭೂಮಿ ಸರ್ಕಾರದ ಅಧೀನದಲ್ಲಿದ್ದು ಕಾಯಿದೆಯ ಪರಿಚ್ಛೇದ 28(5)ರ ಅನ್ವಯ ಎಲ್ಲ ಅಡೆತಡೆಗಳಿಂದ ಮುಕ್ತವಾಗಿರುವುದು.
  • ಕಾಯಿದೆಯ ಪರಿಚ್ಛೇದ 28(6)ರ ಅನ್ವಯ ಸೂಚನಾ ದಿನಾಂಕದ ೩೦ ದಿನಗಳ ಒಳಗಾಗಿ ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ಒಪ್ಪಿಸುವಂತೆ ಹಿಂದಿನ ಭೂಮಾಲೀಕರಿಗೆ ಸೂಚಿಸುವುದು.
  • ಯಾವುದೇ ವ್ಯಕ್ತಿ ಸ್ವಾಧೀನಪಡಿಸಲು ಸಮ್ಮತಿಸದಿದ್ದ ಪಕ್ಷದಲ್ಲಿ ಕಾಯಿದೆಯ ಉಪಪರಿಚ್ಛೇದ (5)ರ ಅನ್ವಯ, ರಾಜ್ಯ ಸರ್ಕಾರವಾಗಲೀ ಅಥವಾ ಈ ನಿಮಿತ್ತ ರಾಜ್ಯ ಸರ್ಕಾರದಿಂದ ನೇಮಿಸಿರುವ ಅಧಿಕಾರಿಗಳು, ಈ ಸಂದರ್ಭದಲ್ಲಿ ಅವಶ್ಯಕವಾದಲ್ಲಿ ಸೂಕ್ತ ಅಧಿಕಾರವನ್ನು ಬಳಸಿಕೊಂಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು.
  • ಕಾಯಿದೆಯ ಪರಿಚ್ಛೇದ 28(8)ರ ಅನ್ವಯ ಕೆಐಎಡಿಬಿಗೆ ಭೂಮಿಯ ವರ್ಗಾವಣೆ.
  • ಹಿಂದಿನ ಭೂ ಮಾಲೀಕರಿಗೆ ಪರಿಹಾರನಿಧಿಯ ಪಾವತಿಮಾಡುವುದು.
  • ದರ ನಿರ್ಣಯ ಸಮಿತಿ (Price Advisory Committee – PAV)ಯನ್ನು ಪರಿಚ್ಛೇದ 29(2)ದ ಅಡಿಯಲ್ಲಿ ನಡೆಸಲಾಗುವುದು. ಒಂದು ವೇಳೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ವಿಸ್ತೀರ್ಣ ೩೦ ಎಕರೆಗಳಿಗಿಂತ ಹೆಚ್ಚಿದ್ದಲ್ಲಿ PAVಯನ್ನು ಜಿಲ್ಲಾಧಿಕಾರಿಗಳು ಬೆಲೆ ಸಲಹಾ ಸಮಿತಿಯನ್ನು G.O. ಸಂ.400 SPQ ೨೦೧೧ ದಿನಾಂಕ ೨೬-೧೧-೨೦೧೨ರ ಅನ್ವಯ ನಿರ್ವಹಿಸುವರು, ಸ್ವಾಧೀನಪಡಿಸಿಕೊಂಡಿರುವ ಜಾಗ ೩೦ ಎಕರೆಗಳಿಗಿಂತ ಕಡೆಮೆ ಇದ್ದಲ್ಲಿ ಕೆಐಎಡಿಬಿಯ ಉಪ ಆಯುಕ್ತರು ನಿರ್ವಹಿಸುವರು.
  • ಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿ ಯಾವುದೇ ಕಟ್ಟಡಗಳಿದ್ದಲ್ಲಿ ಸಂಬಂಧಿತ ವಿಭಾಗಗಳಿಂದ ಸೂಚಿಸಲ್ಪಟ್ಟ. ಮೌಲ್ಯಮಾಪನಕ್ಕನುಗುಣವಾಗಿ ಪರಿಹಾರ ನಿಧಿಯನ್ನು ಪಾವತಿಸಲಾಗುವುದು.
  • ಭೂಮಿಯ ಬೆಲೆಯಲ್ಲಿನ ಹೆಚ್ಚಳ ಮತ್ತು ಜಮೀನಲ್ಲಿರುವ ಕಟ್ಟಡದ ಮೌಲ್ಯವನ್ನು, ಸಂಬಂಧಿತ ಮಂಡಳಿಯ ಸೇವಾ ಶುಲ್ಕದೊಂದಿಗೆ ಪ್ರವರ್ತಕರು ಭರಿಸತಕ್ಕದ್ದು.
  • ಹಂಚಿಕೆ ಪತ್ರ ಸ್ವಾಧೀನಪತ್ರ ಮತ್ತು ೯೯ ವರ್ಷಗಳ ಭೋಗ್ಯ ಕರಾರು ಪತ್ರ ನೀಡಲಾಗುವುದು
  • ಪ್ರವರ್ತಕರು ಭೂಸ್ವಾಧೀನಪಡಿಸಿಕೊಂಡ ೩೬ ತಿಂಗಳುಗಳಲ್ಲಿ ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳನ್ನು ಮತ್ತು ೬೦ ತಿಂಗಳುತಳಲ್ಲಿ ಭಾರಿ ಹಾಗೂ ಬೃಹತ್ ಕೈಗಾರಿಕೆಗಳನ್ನು ಆರಂಭಿಸುವುದು.
ಕ್ರ.ಸಂ ಸ್ವಾಧೀನದ ಉದ್ದೇಶ ವಲಯ ೧ & ೨ ವಲಯ ೩ & ೪
1. ಸರ್ಕಾರಿ ಇಲಾಖೆಗಳ/ರಾಜ್ಯ ಸರ್ಕಾರ ಉದ್ದಿಮೆಗಳ ಪರವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು. 7.5% 7.5%
2. ಭಾರತ ಸರ್ಕಾರದ ಇಲಾಖೆಗಳ/ ಭಾರತ ಸರ್ಕಾರದ ಉದ್ದಿಮೆಗಳ ಪರವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು. Undertakings 10% 10%
3. ಸಾಮನ್ಯ ತ್ಯಾಜ್ಯ ಜಲ ಸಂಸ್ಕರಣಾ ಘಟಕ/ಘನತ್ಯಾಜ್ಯ ವಿಲೇವಾರಿ ಯೋಜನೆ/ಕೊಳಚೆ ನೀರು ಸಂಸ್ಕರಣ ಘಟಕ, ಕುಡಿಯುವ ನೀರು ಸರಬರಾಜು ಯೋಜನೆ/ಯೋಜನೆಗಳು 5% 5%
4. FKCCI, BCIC, CII, FICCI, KASSIA, ಲಘು ಉದ್ಯೋಗ ಭಾರತಿ ಮುಂತಾದ ಕೈಗಾರಿಕಾ ಸಂಘಗಳ/ಸಂಸ್ಥೆಗಳ ಪರವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು. 7.5% 7.5%
5. ಮೇಲಿನ ಕ್ರ.ಸಂ. ೧ ಮತ್ತು ೪ ಅನ್ನು ಹೊರತುಪಡಿಸಿ ಎಲ್ಲ ಏಕ ಘಟಕ ಸಂಕೀರ್ಣಗಳ ಪರವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು. 10% 12%