ಕರ್ನಾಟಕ ಶೋಧನೆ

ಕರ್ನಾಟಕ- ಏಷ್ಯಾ ಖಂಡದ ಜ್ಞಾನ ಸರೋವರ/ನಡುಗಡ್ಡೆ

  • 103 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು.
  • 19 ವಿಶ್ವವಿದ್ಯಾನಿಲಯಗಳು.
  • 158 ಇಂಜಿನಿಯರಿಂಗ ಕಾಲೇಜುಗಳು .
  • 114 ವೈದ್ಯಕೀಯ, ದಂತ ಆಯುರ್ವೇದ, ಯೂನಾನಿ, ಮತ್ತು ಅರೆ ವೈದ್ಯಕೀಯ ಸಂಸ್ಥೆಗಳು .
  • 181 ಪಾಲಿಟೆಕ್ನಿಕ್ (ಬಹು ತಾಂತ್ರಿಕ ಶಿಕ್ಷಣ ಸಂಸ್ಥೆಗಳು).
  • 1003 ಕೈಗಾರಿಕೋದ್ಯಮ ತರಬೇತಿ ಕೇಂದ್ರಗಳು .
  • 47 ಅಂತರಾಷ್ಟ್ರೀಯ ಶಾಲೆಗಳು .
  • ಕರ್ನಾಟಕ-ಭಾರತದ ಮಾಹಿತಿ ತಂತ್ರಜ್ಞಾನದ ಸಾಗರ/ ಸರೋವರ

ಬೆಂಗಳೂರು –ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ

  • 743 ಬಹುರಾಷ್ಟ್ರೀಯ ಕಂಪನಿಗಳು.
  • 87 ಎಸ್.ಇ.ಐ ಸಿಎಂಎಂ ಹಂತದ / ಮಟ್ಟದ 5 ವಿಶ್ವದಲ್ಲಿನ ಮಾಹಿತಿ ಅಂತರಾಷ್ಟ್ರೀಯ ತಂತ್ರಜ್ಞಾನದ ಕಂಪನಿಗಳು, ಭಾರತದ 63 ಕಂಪನಿಗಳಲ್ಲಿ 32 ಅಂದಾಜು ಶೇಕಡ 50ರಷ್ಟು ಬೆಂಗಳೂರಿನಲ್ಲಿವೆ..
  • 2084 ಮಾಹಿತಿ ತಂತ್ರಜ್ಞಾನ/ಅಂತರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳು.
  • 5,50,000 ಐ.ಟಿ ವೃತ್ತಿಪರ ತಜ್ಞರು (ಒಟ್ಟಾರೆಯಾಗಿ ದೇಶದಲ್ಲಿನ 1/3 ವೃತ್ತಿಪರ ತಜ್ಞರನ್ನು ಹೊಂದಿದೆ).
  • ವಿಶ್ವದಲ್ಲೇ 4ನೇ ಬಹುದೊಡ್ಡ ತಾಂತ್ರಿಕ ಕ್ಲಸ್ಟರ್.

ಕರ್ನಾಟಕ ರಾಜ್ಯ ನಕ್ಷೆ

  • ಭಾರತದ ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ ೮ನೇಯ ದೊಡ್ಡ ರಾಜ್ಯ.
  • ೧೯೨,೦೦೦ ಚದರ ಕ.ಮೀ. ವಿಸ್ತೀರ್ಣವಿದ್ದು ೨೯ ಜಿಲ್ಲೆಗಳು, ೧೭೫ ತಾಲ್ಲೂಕುಗಳು ಮತ್ತು ೨೭೦೨೮ ಗ್ರಾಮಗಳನ್ನು ಒಳಗೊಂಡಿದೆ.
  • ೨೦೦೧ರ ಮಾಹಿತಿಯನ್ವಯ ಜನಸಂಖ್ಯೆ ೫೨೮.೫೧ ಲಕ್ಷ.
  • ಸರಾಸರಿ ಮಳೆ ೫೦-೪೦೦ ಸೆಂ.ಮೀ.ಗಳು ಮತ್ತು ಕನಿಷ್ಠ ಉಷ್ಣಾಂಶ ೧೨.೫ – ೩೦° ಸೆಂಟಿಗ್ರೇಡ್.
  • ಜಗತ್ತಿನ ಪಾರಂಪಾರಿಕ ಹಾಗೂ ಪ್ರೇಕ್ಷಣೀಯ ಕೇಂದ್ರಗಳ ನೆಲೆ.
  • ಶೇ.೬೭.೦೪ ರಷ್ಟು ಸಾಕ್ಷರತೆ.
  • ೩೭೪೨ ಕಿ.ಮೀ.ಗಳಷ್ಟು ರಾಷ್ಟ್ರೀಯ ಹೆದ್ದಾರಿ ಮತ್ತು ೯೮೨೯ ಕಿ.ಮೀ. ರಾಜ್ಯ ಹೆದ್ದಾರಿ.
  • ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಮತ್ತು ಹಂಪೆ, ಒಟ್ಟು ೬ ನಗರಗಳಲ್ಲಿರುವ ವಿಮಾನ ನಿಲ್ದಾಣಗಳು ವಾಯುಮಾರ್ಗದ ಮೂಲಕ ರಾಜ್ಯದ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ.
  • ಕರಾವಳಿಯ ಉದ್ದ ೩೨೦ ಕಿ.ಮೀ. ಮಂಗಳೂರು, ಕಾರವಾರ ಮತ್ತು ಬೆಳೆಕೆರೆಗಳಲ್ಲಿ ೩ ಪ್ರಮುಖ ಬಂದರುಗಳು ಮತ್ತು ೫ ಸಣ್ಣ ಬಂದರುಗಳಿವೆ.
  • ೩೧೯೨ ಕ.ಮೀ. ಉದ್ದದ ರೈಲುಮಾರ್ಗ
  • ವಿದ್ಯತ್: ಸದ್ಯದ ಸಾಮರ್ಥ್ಯ ೪೩೬೩MW ಯೋಜನೆ ೧೦,೦೦೦MWಗಳು. ಪರ್ಯಾಯ ಶಕ್ತಿ ಮೂಲಗಳನ್ನು ಬಳಸಿಕೊಳ್ಳುವುದುರಲ್ಲಿ ಅಗ್ರಪಂಕ್ತಿಯಲ್ಲಿರುವುದು ರಾಜ್ಯದ ಹೆಗ್ಗಳಿಕೆ.
  • ಉಕ್ಕು, ಚಿನ್ನ, ಕಲ್ಲುನಾರು (Asbestos), ಬಾಕ್ಸೈಟ್, ಕ್ರೋಮೈಟ್, ಡಾಲೊಮೈಟ್, ಕಾಯೋಲಿನ್, ಸುಣ್ಣಕಲ್ಲು (limestone), ಮ್ಯಾಗ್ನಾಸೈಟ್, ಮ್ಯಾಂಗನೀಸ್, ಕ್ವಾಟ್ಝ್‌ (ಬೆಣಚುಕಲ್ಲು), ಸಿಲಿಕಾ, ಫೆಲ್ಸೈಟ್, ಮರಳು, ಫಶ್‌ಸೈಟ್ ಕ್ವಟ್ಝ್‌ ಮತ್ತು ಆಲಂಕಾರಿಕ ಗ್ರಾನೈಟ್ ಕಲ್ಲುಗಳ ಸಮೃದ್ಧ ನಿಕ್ಷೇಪಗಳುಳ್ಳ ಶ್ರೀಮಂತ ರಾಜ್ಯ.
  • ಸಮತೋಲಿತ ಜೀವವೈವಿಧ್ಯ.