TMTP ನಲ್ಲಿ ವಿವಿಧ ಪೋಸ್ಟ್ಗೆ ನೇಮಕಾತಿ ಪ್ರಕಟಣೆ – 25.07.2017

ತುಮಕೂರು ಮಷಿನ್ ಟೂಲ್ ಪಾರ್ಕ

ನಂ.49,4 ಮತ್ತು 5ನೇ ಮಹಡಿ, ‘ಈಸ್ಟ್ ವಿಂಗ್’, ಖನಿಜ ಭವನ, ರೇಸ್‍ಕೋರ್ಸ್ ರಸ್ತೆ,
ಬೆಂಗಳೂರು- 560 001 ದೂರವಾಣಿ: 080- 22265383 ಇxಣ:276
ವೆಬ್‍ಸೈಟ್:www.kiadb.inಇ-ಮೇಲ್: tmtp@kiadb.in

ಕರ್ನಾಟಕ ಸರಕಾರವು ತುಮಕೂರು ಮಷಿನ್ ಟೂಲ್ಸ ಪಾರ್ಕವನ್ನು ಕಂಪನಿ ಕಾಯ್ದೆ 2013 ರ ಅನ್ವಯ ಸ್ಥಾಪಿಸಿರುತ್ತದೆ. ತುಮಕೂರು ಮಷಿನ್ ಟೂಲ್ಸ ಪಾರ್ಕದ ಕಾರ್ಯಯೋಜನೆಯ ಅನುಷ್ಠಾನಕ್ಕಾಗಿ ಮುಖ್ಯ ತ್ರಾಂತ್ರಿಕ ಅಧಿಕಾರಿಗಳರವರ ಅಡಿಯಲ್ಲಿ ಒಬ್ಬ ತ್ರಾಂತ್ರಿಕ ಸಹಾಯಕರು ಬೇಕಾಗಿರುತ್ತಾರೆ. ಸದರಿಯವರು ಈ ಕೆಳಗೆ ನೀಡಿರುವ ಅರ್ಹತೆಯನ್ನು ಹೊಂದಿರಬೇಕು.

ಹಿರಿಯ ಕಾರ್ಯನಿರ್ವಾಹಕ ಸಹಾಯ

  1. ಅಭ್ಯರ್ಥಿಯು ಯಾವುದೇ ಪದವಿ ಹೊಂದಿರಬೇಕು.
  2. ಅಭ್ಯರ್ಥಿಯು ಗಣಕಯಂತ್ರದ ಕಾರ್ಯಾಚರಣೆಯ ಜ್ಞಾನ ಪಡೆದಿರಬೇಕು
  3. ಕೆ.ಸಿ.ಎಸ್.ಆರ್., ಕೆ.ಎಫ್.ಸಿ, ಕೆ.ಸಿ.ಎಸ್, (ಸಿ.ಸಿ.ಎ) ಕಾಯ್ದೆ, ಕಾನೂನು ಜ್ಞಾನ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  4. ರಾಜ್ಯ ಸರ್ಕಾರದಲ್ಲಿ ಅಥವಾ ರಾಜ್ಯ ಸರ್ಕಾರದ ಅಧೀನ ಸ್ವಾಯತ್ತತೆಯಲ್ಲಿ /ಮಂಡಳಿ/ ನಿಗಮಗಳಲ್ಲಿ ಕನಿಷ್ಠಪಕ್ಷ 15 ರಿಂದ 20 ವರ್ಷ ಸೇವೆಸಲ್ಲಿಸಿ ಅನುಭವ ಪಡೆದ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುವುದು.
  5. 64 ವರ್ಷ ವಯೋಮಾನಕ್ಕೆ ಕಡಿಮೆ ಇರಬೇಕು.

ಹಿರಿಯ ಕಾರ್ಯ ನಿರ್ವಾಹಕ ಲೆಕ್ಕಾಧಿಕಾರಿ

  1. ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರಬೇಕು.
  2. ಗಣಕಯಂತ್ರ ಕಾರ್ಯಾಚರಣೆಯ ಜ್ಞಾನ ಹೊಂದಿರಬೇಕು.
  3. ಅಭ್ಯರ್ಥಿಯು ಅಂತಿಮ ಲೆಕ್ಕ ತಯಾರಿಕೆ, ಆರ್ಥಿಕ / ಹಣಕಾಸಿನ ನಿರ್ವಹಣೆ, ಏಕ ಶಿರ್ಷಿಕೆ ಲೆಕ್ಕದ ನಮೂದು ಜ್ಞಾನ, ಸರ್ಕಾರಿ ಲೆಕ್ಕ ವ್ಯವಸ್ಥೆಯ ಮತ್ತು ದ್ವೀಗುಣ ಶಿರ್ಷಿಕೆ ಲೆಕ್ಕದ ನಮೂದು ವ್ಯವಸ್ಥೆಯ ಜ್ಞಾನ ಹೊಂದಿರಬೇಕು.
  4. ರಾಜ್ಯ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಧೀನ ಸ್ವಾಯತ್ತ ಸಂಸ್ಥೆಯಲ್ಲಿ ಕನಿಷ್ಠಪಕ್ಷ 15 ರಿಂದ 20 ವರ್ಷ ಸೇವೆಸಲ್ಲಿಸಿ ಅನುಭವ ಪಡೆದ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುವುದು.

ಟ್ಯಾಲಿ ಜ್ಞಾನ ಹೊಂದಿರಬೇಕು.
ಮೂಲ ವೇತನ : 14550+ ತುಟ್ಟಿಭತ್ಯೆ +ಮನೆ ಬಾಡಿಗೆ ಭತ್ಯೆ +ಸಿಸಿಎ ಮತ್ತು ಇತರೆ ಅರ್ಹತಾ ಯೋಗ್ಯ ಭತ್ಯೆ (ತಿಂಗಳಿಗೆ ಸರಿಸುಮಾರು ರೂ .28,000 / -)

ತಾಂತ್ರಿಕ ಸಹಾಯಕ

  1. ತ್ರಾಂತ್ರಿಕ ವಿಷಯದಲ್ಲಿ ಪರಿಣಿತರಾಗಿರಬೇಕು.
  2. ಎಸ್ಟಿಮೇಟ್, ಟೆಂಡರ್, ಡಿ.ಪಿ.ಆರ್, ಟೆಂಡರ್ ಮೌಲ್ಯ ಮಾಪನ ಮಾಡುವ ಬಗ್ಗೆ ಪರಿಣಿತರಾಗಿರಬೇಕು.
  3. 10 ವರ್ಷ ಮೇಲ್ಟಟ್ಟು ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ಸರ್ಕಾರಿ ವಲಯದಲ್ಲಿ ಕೆಲಸ ನಿರ್ವಹಿಸಿರಬೇಕು..

ಪಾವತಿ: Basic=28,100 ತುಟ್ಟಿಭತ್ಯೆ +ಮನೆ ಬಾಡಿಗೆ ಭತ್ಯೆ +ಸಿಸಿಎ ಮತ್ತು ಇತರೆ ಅರ್ಹತಾ ಯೋಗ್ಯ ಭತ್ಯೆ (ತಿಂಗಳಿಗೆ ಸರಿಸುಮಾರು ರೂ .60,000 / -)
ಕೊನೆಯ ದಿನ : 03-08-2017, ಸಾಯಂಕಾಲ 5:00pm ಗಂಟೆಯೊಳಗೆ

ಕ್ರಮ ಸಂಖ್ಯೆ ವಿವರ ನೋಡಿ ಡೌನ್ ಲೋಡ್ ಮಾಡಿ
1. ಅಧಿಸೂಚನೆ -1
2. ಅಧಿಸೂಚನೆ -2
2. ಅರ್ಜಿ