ಕೆಐಎಡಿಬಿಯ ಬಗ್ಗೆ

ಕೆ.ಐ.ಎ.ಡಿ.ಬಿ. – ಶ್ರೇಷ್ಠ ಕೈಗಾರಿಕಾ ಭೂ

ಕರ್ನಾಟಕ ಕೈಗಾರಿಕ ಪ್ರದೇಶಗಳ ಅಭಿವೃದ್ಧಿ ವಿಧಿ (ಕೆಐಎಡಿಬಿ ವಿಧಿ) – ೧೯೬೬, ಆದೇಶ ಸಂ.ಸಿಐ೬೭ ಜಿಎಂಐ ೬೬ ದಿನಾಂಕ ೨೦ನೇ ಜೂನ್ ೧೯೬೬, ಇದರ ಅನ್ವಯ, ಕರ್ನಾಟಕ ರಾಜ್ಯದ ಕೈಗಾರಿಕಾ ವಲಯಗಳಲ್ಲಿ ತ್ವರಿತ ಮತ್ತು ಕ್ರಮಬದ್ಧವಾಗಿ ಕೈಗಾರಿಕೆಗಳ ಸ್ಥಾಪನೆ ಮತ್ತು ಅವುಗಳ ಅಭಿವೃದ್ಧಿಪಡಿಸಲು ಹಾಗೂ ಕೈಗಾರಿಕಾ ಮೂಲಭೂತ ಅವಶ್ಯಕತೆಗಳನ್ನು ಹಾಗೂ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ರಚಿಸಲ್ಪಟ್ಟ ಒಂದು ಶಾಸನಬದ್ಧ ಸಂಸ್ಥೆಯೇ ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾಸ್ ಡೆವೆಲಪ್‌ಮೆಂಟ್ ಬೋರ್ಡ್‌ – ಕೆಐಎಡಿಬಿ (ಕರ್ನಾಟಕ ಕೈಗಾರಿಕ ಪ್ರದೇಶಗಳ ಅಭಿವೃದ್ಧಿ ಮಂಡಳಿ). ಕೈಗಾರಿಕಾ ಮತ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಉದ್ದೇಶಕ್ಕಾಗಿ ತ್ವರಿತ ಭೂಸ್ವಾಧಿನ ಅವಕಾಶವನ್ನು ಕೆಐಎಡಿಬಿ ವಿಧಿ-೧೯೬೬, ಒಂದು ನೂತನ ವಿಧಿಯು ಒದಗಿಸುತ್ತದೆ.

ಕೆಐಎಡಿಬಿಯು, ಕೆಐಎಡಿಬಿ ವಿಧಿಯಲ್ಲಿನ ನಿಯಮ ಮತ್ತು ನಿಬಂಧನೆಗಳ ಅನ್ವಯ ಕಾರ್ಯನಿರ್ವಹಿಸುತ್ತದೆ. ಮಂಡಳಿಯು ಅಧಿಕಾರರೂಢರಾಗಿರುವ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ನಿರ್ಧಾರಗಳಿಗಾಗಿ ಮತ್ತು ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಮಂಡಳಿಯ ಸದಸ್ಯರು ನಿಯಮಿತವಾಗಿ ಸಭೆ ಸೇರುತ್ತಿರುತ್ತಾರೆ.ಕೆಐಎಡಿಬಿಯ ದೂರದರ್ಶಿತ್ವ ಮತ್ತು ವಿಶ್ವದರ್ಜೆಯ ಮೂಲಭೂತ ವ್ಯವಸ್ಥೆಯು, ತಮ್ಮ ಪ್ರಾರಂಭಿಕ ಉದ್ದಿಮೆಗಳಿಗೆ ಕರ್ನಾಟಕವು ಅತ್ಯುತ್ತಮ ನೆಲೆ ಎಂದೆನಿಸಿ ಜಗತ್ತಿನೆಲ್ಲೆಡೆಯ ಹೂಡಿಕೆದಾರರ ಗಮನವನ್ನು ಸೆಳೆದಿದೆ.