ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಇಲಾಖೆ

ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಇಲಾಖೆ ಕೈಗಾರಿಕೋದ್ಯಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಮತ್ತು ಅಭಿವೃದ್ಧಿ ಮತ್ತು ಸೌಲಭ್ಯಾವಕಾಶಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಪರಿವರ್ತನಾಕಾರಿ ಪಾತ್ರ ವಹಿಸುತ್ತದೆ.ಹೂಡುವಳಿ ಮತ್ತು ವ್ಯಾಪಾರವನ್ನು ಹೆಚ್ಚಿಸಲು ಇಲಾಖೆ ನೀತಿ ನಿಯಮಗಳನ್ನು ರಚಿಸುವುದು ಮತ್ತು ರಾಜ್ಯದ ನೀತಿಗಳನ್ನು ಜಾರಿಗೊಳಿಸುವುದು.ರಾಜ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿನ ಆಯಾ ವಿಭಾಗದ ಅನುಕೂಲಗಳನ್ನು ಗುರುತಿಸಿ ಉದ್ಯಮದ ಬೆಳವಣಿಗೆ ಸಂರಕ್ಷಿಸುವ ಇಲಾಖೆ ಪ್ರಮುಖ ಪಾತ್ರವಹಿಸುತ್ತದೆ.ಇಲಾಖೆಯ ವೈಶಿಷ್ಟ್ಯ ಉದ್ಯಮದ ಬೆಳವಣಿಗೆಯತ್ತ ಇರುವ ಯೋಜನೆಗಳನ್ನು ಬೇಕಾದ ಎಲ್ಲ ಅಗತ್ಯವನ್ನು ಒದಗಿಸುವುದಾಗಿದೆ.ಆಧುನೀಕರಣ, ತಾಂತ್ರಿಕತೆ,ಉನ್ನತೀಕರಣ ಮತ್ತು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇಲಾಖೆ ಸಹಕರಿಸುವುದು,ಇಷ್ಟೇ ಅಲ್ಲ ಉದ್ಯಮಿಗಳಿಗೆ ಹಾಗೂ ಕೈಗಾರಿಕೋದ್ಯಮಗಳಿಗೆ ತಮ್ಮ ಸಂಘಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ವೇದಿಕೆ ಒದಗಿಸುವುದು.ಈ ಎಲ್ಲದರ ಮೂಲಕ ಅವುಗಳನ್ನು ಸರ್ಕಾರದ ನೀತಿಗಳಾಗಿಸುವುದು.

ಹೀಗೆ ಇಲಾಖೆಯಿಂದ ಸೌಲಭ್ಯಗಳನ್ನು ಹೊಂದಿ ಕೈಗೊಂಡಂತಹ ಕೆಲವು ಮಹತ್ವದ ಪೂರ್ವಯೋಜಿತ ಯೋಜನೆಗಳು ರಾಜ್ಯಾದ್ಯಂತ ಅಭಿವೃದ್ಧಿ ಕೇಂದ್ರಗಳನ್ನು,ರಫ್ತು ಹೆಚ್ಚಿಸುವುದು,ಕೈಗಾರಿಕೋದ್ಯಮ ಉದ್ಯಾನಗಳ ಸ್ಥಾಪನೆ,ಅಂತರಾಷ್ಟ್ರೀಯ ತಾಂತ್ರಿಕ ಉದ್ಯಾನ,ವಿದ್ಯುನ್ಮಾನ ನಗರ,ಆಹಾರ ಮತ್ತು ಕೃಷಿ ತಾಂತ್ರಿಕ ಉದ್ಯಾನ,ಕೃಷಿ ಉತ್ಪನ್ನಗಳ ರಫ್ತು ವಲಯಗಳು,ವಿಶೇಷ ಆರ್ಥಿಕ ವಲಯ,ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇತ್ಯಾದಿಗಳನ್ನು ಸಹ ಇದು ಒಳಗೊಂಡಿರುತ್ತದೆ.

ಈ ಇಲಾಖೆ ಬೃಹತ್ ಯೋಜನೆಗಳೊಂದಿಗೆ ಸಣ್ಣ ವ್ಯಾಪಾರ ಮತ್ತು ಆಯೋಜಿತ ರಚನೆಯೊಳಗೆ ಕೈಗಾರಿಕೋದ್ಯಮ ನಿವಾಸಗಳನ್ನು ಉನ್ನತ ಮಟ್ಟದಲ್ಲಿ ವಿಕೇಂದ್ರೀಕರಣಗೊಳಿಸಬಹುದಾಗಿದೆ.ಈ ಇಲಾಖೆ ಜಿಲ್ಲಾ ಕೈಗಾರಿಕೋದ್ಯಮ ಕೇಂದ್ರ, ವಿವಿಧ ಮಂಡಳಿಗಳು ಮತ್ತು ನಿಗಮಗಳು ಮತ್ತು ವಿಶೇಷ ಉದ್ದೇಶಿತ ವಾಹನಗಳ ಮೂಲಕ ಅದು ಕಾರ್ಯನಿರ್ವಹಿಸುತ್ತದೆ.ಸರ್ಕಾರದ ಅನೇಕ ಕಾರ್ಯ ನೀತಿಗಳನ್ನು ಈ ಯೋಜನೆಗಳ ಮೂಲಕ ಜಾರಿಗೊಳಿಸುವುದರೊಂದಿಗೆ ವೇಗ ಮಿತಿಯಲ್ಲಿ ಶೀರ್ಘವಾಗಿ ಕಾರ್ಯ ನಿರ್ವಹಿಸಲು ಈ ಯೋಜನೆಗಳನ್ನು ವಿಕೇಂದ್ರೀಕರಣಗೊಳಿಸಲಾಗಿದೆ.

ಕರ್ನಾಟಕ ಇಲಾಖೆಯು ವೇಗವಾಗಿ ಕಾರ್ಯ ನಿರ್ವಹಿಸಲು ಏಕಗವಾಕ್ಷಿ ಕಾರ್ಯತಂತ್ರವನ್ನು ಸ್ಥಾಪಿಸಿದೆ.ಇದರಿಂದಾಗಿ ಒಂದೇ ಕಡೆಯಿಂದ ಯೋಜನೆಗಳಿಗೆ ಬೇಕಾದ ಮೂಲಭೂತ ಸೌಕರ್ಯ/ಸೌಲಭ್ಯ/ಉತ್ತೇಜನ /ರಿಯಾಯತಿ ಮತ್ತು ಉದ್ಯಮ ಸ್ಥಾಪನೆಗೆ ಸಹಾಯ ಮತ್ತು ವ್ಯಾಪಾರ ಕೈಗೊಳ್ಳಲು ಇದು ಸಹಕರಿಸುವುದಾಗಿದೆ.ಕರ್ನಾಟಕದಲ್ಲಿ ಏಕಗವಾಕ್ಷ ಕಾರ್ಯನೀತಿ ಅಡಿಯಲ್ಲಿ ಕರ್ನಾಟಕ ಉದ್ಯೋಗ ಮಿತ್ರ ನೋಡಲ್ ಕೇಂದ್ರದಲ್ಲಿ ಈ ಕಾರ್ಯ ನಿರ್ವಹಿಸುತ್ತದೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಸ್ವ ಉದ್ಯೋಗ ಯೋಜನೆಗಳನ್ನು ಹುಟ್ಟು ಹಾಕಿ ಅವುಗಳನ್ನು ಜಾರಿಪಡಿಸಿದೆ.