ಕಟ್ಟಡ ಯೋಜನೆ

ಅಭಿವೃದ್ಧಿ ಯೋಜನೆಗೆ ಅರ್ಜಿ/ಕಟ್ಟಡ ಯೋಜನೆ ಅನುಮೋದನೆ ಮತ್ತು ಪ್ರಾರಂಭಿಕ ಪ್ರಮಾಣಪತ್ರ ವಿತರಣೆ ಮತ್ತು ವಾಸ ಪ್ರಮಾಣಪತ್ರಕ್ಕೆ ಕೆಐಎಡಿಬಿ ವೆಬ್ ಪೋರ್ಟಲ್ ನಲ್ಲಿರುವ ಆನ್‌ಲೈನ್ ಮೆಕಾನಿಸಂ ಬಳಸಿ ಸಲ್ಲಿಸತಕ್ಕದ್ದು (www.kiadb.in)

ಕ್ರಮಸಂಖ್ಯೆ ವಿವರಗಳು
(a)

ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆ

  1. ಮಂಜೂರಾತಿದಾರ/ಅರ್ಜಿದಾರ ಸೂಕ್ತ ದಾಖಲೆಗಳು/ಅಗತ್ಯದ ಪ್ರಕಾರ ನಿರಾಪೇಕ್ಷಣೆ ಪತ್ರವನ್ನು ಅರ್ಜಿ ಜೊತೆಯಲ್ಲಿ ಸಲ್ಲಿಸಬೇಕು.(ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ (www.kiadb.in)
  2. ಅಭಿವೃದ್ಧಿ ಯೋಜನೆಗೆ/ಕಟ್ಟಡ ಯೋಜನೆ ಅನುಮೋದನೆಗೆ ಅಗತ್ಯವಿರುವ ನಿರಾಪೇಕ್ಷಣಾ ಪತ್ರ/ಅನುಮೋದನೆ ಪತ್ರವನ್ನು ಸಂಬಂಧಪಟ್ಟ ಇಲಾಖೆ/ಮಂಡಳಿ/ಪ್ರಾಧಿಕಾರವನ್ನು ಕೆಳಗೆ ನೀಡಿರುವ ಆನ್‌ಲೈನ್ ಲಿಂಕ್ಸ್‌ಗಳನ್ನು ಬಳಸಿ ಸಂಪರ್ಕಿಸಬೇಕು. (ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ (www.kiadb.in)
  3. ಕಟ್ಟಡ ಯೋಜನೆ ಅನುಮೋದನೆಗೆ ನಿಗದಿತ ಶುಲ್ಕವನ್ನು ಇ-ಪೇಮೆಂಟ್ಸ್ ಬಳಸಿ ಮಾತ್ರ ಪಾವತಿ ಮಾಡತಕ್ಕದ್ದು (ರೂ. ೧ ರಿಂದ ರೂ. ೫೦೦ ಕೋಟಿವರೆಗಿನ ಮೊತ್ತವನ್ನು ಅರ್.ಟಿ.ಜಿ.ಎಸ್/ಎನ್.ಇ.ಎಫ್.ಟ್/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಬಳಸಿ ಪಾವತಿಸಬಹುದು).
  4. ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆಯ ಒಂದು ಪ್ರತಿಯನ್ನು ಸಂಬಂಧಪಟ್ಟ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿಗೆ ಅನುಮೋದನೆಗೆ ಸಲ್ಲಿಸಬೇಕು.
  5. ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆಯನ್ನು ಕೆಐಎಡಿಬಿಯ ಸಮಿತಿಯಲ್ಲಿ ಸೇರ್ಪಡೆಯಾಗಿರುವ ಆರ್ಕಿಟೆಕ್‌ಟ್ಸ್/ಇಂಜಿನಿಯರ್‌ಗಳು/ನಿರ್ಮಾಣ ಇಂಜಿನಿಯರ್‌ಗಳು/ನಗರ ಯೋಜಕರು ಅದನ್ನು ತಯಾರಿಸಿ ಮತು ಅವರ ಸಹಿ ಮತ್ತು ಸೀಲ್ ಹಾಕಿ ಸಲ್ಲಿಸತಕ್ಕದ್ದು.(www.kiadb.in)
  6. ನಿರ್ದಿಷ್ಟ ಪಡಿಸಿದ ಸಮಯದಲ್ಲಿ ಪ್ರಸ್ತಾಪಿಸಿದ ಪ್ಲಾಟಿನ ತಪಾಸಣೆಯನ್ನು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಮಾಡತಕ್ಕದ್ದು ಮತ್ತು ತಪಾಸಣೆ ವರದಿಯನ್ನು ಸ್ಕೆಚಿನ ಜೊತೆಯಲ್ಲಿ ನಿಗದಿತ ಸ್ವರೂಪದಲ್ಲಿ ಕೆಐಎಡಿಬಿ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡತಕ್ಕದ್ದು. ಇಲ್ಲಿ ಕ್ಲಿಕ್ ಮಾಡಿ(ಸರ್ಕಾರದ ಸುತ್ತೋಲೆ ಸಂಖ್ಯೆ ಸಿಐ ೮ ಎಸ್‌ಪಿಐ ೨೦೧೫ ದಿನಾಂಕ ೩೦/೪/೨೦೧೫ ಮತ್ತು ಕೆಐಎಡಿಬಿ ಸುತ್ತೋಲೆ ಸಂಖ್ಯೆ ಕೆಐಎಡಿಬಿ/ಜೆಡಿಟಿಪಿ/೫೫/೨೦೧೬-೧೭ ದಿನಾಂಕ ೧/೪/೨೦೧೬ ರ ಪ್ರಕಾರ).
  7. ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆ ಅನುಮೋದನೆಯಾದ ನಂತರ, ಅನುಮೋದನೆ ಪತ್ರದ ಜೊತೆಯಲ್ಲಿ ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆ ಅನುಮೋದನೆ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಸೀಲ್ ಮತ್ತು ಸಹಿಯೊಂದಿಗೆ ಅಪ್‌ಲೋಡ್ ಮಾಡತಕ್ಕದ್ದು.(ದೃಢೀಕರಿಸಿದ ನಕಲು ೩ ಪ್ರತಿಗಳಲ್ಲಿ ಒಂದು ಪ್ರತಿಯನ್ನು ವಲಯ ಕಚೇರಿಯಲ್ಲಿ ಉಳಿಸಿಕೊಳ್ಳಬೇಕು, ಒಂದು ಪ್ರತಿಯನ್ನು ಮುಖ್ಯ ಅಭಿವೃದ್ಧಿ ಅಧಿಕಾರಿಗೆ ಮತ್ತು ಮುಖ್ಯ ಇಂಜಿನಿಯರ್ ವಿಭಾಗಕ್ಕೆ ಜೆಡಿಟಿಪಿ ಎಂದು ಗುರುತಿಸಿ ಕಳುಹಿಸತಕ್ಕದ್ದು ಮತ್ತು ಒಂದನ್ನು ಮಂಜೂರಾತಿದಾರ/ಅರ್ಜಿದಾರನಿಗೆ ಮರಳಿ ನೀಡತಕ್ಕದ್ದು.)
(b)

ಪ್ರಾರಂಭಿಕ ಪ್ರಮಾಣಪತ್ರ ಮತ್ತು ವಾಸ ಪ್ರಮಾಣಪತ್ರ:

  1. ಮಂಜೂರಾತಿದಾರ/ಅರ್ಜಿದಾರ ಸೂಕ್ತ ದಾಖಲೆಗಳು/ಅಗತ್ಯದ ಪ್ರಕಾರ ನಿರಾಪೇಕ್ಷಣೆ ಪತ್ರವನ್ನು ಅರ್ಜಿ ಜೊತೆಯಲ್ಲಿ ಸಲ್ಲಿಸಬೇಕು.(ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ (www.kiadb.in)
  2. ನಿರಾಪೇಕ್ಷಣಾ ಪತ್ರಕ್ಕೆ/ಅನುಮೋದನೆ ಪತ್ರಕ್ಕೆ ಸಂಬಂಧಪಟ್ಟ ಇಲಾಖೆ/ಮಂಡಳಿ/ಪ್ರಾಧಿಕಾರವನ್ನು ಕೆಳಗೆ ನೀಡಿರುವ ಆನ್‌ಲೈನ್ ಲಿಂಕ್ಸ್‌ಗಳನ್ನು ಬಳಸಿ ಸಂಪರ್ಕಿಸಬೇಕು.(ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ(www.kiadb.in)
  3. ನಿರ್ದಿಷ್ಟ ಪಡಿಸಿದ ಸಮಯದಲ್ಲಿ ಪ್ರಸ್ತಾಪಿಸಿದ ಪ್ಲಾಟಿನ ತಪಾಸಣೆಯನ್ನು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಮಾಡತಕ್ಕದ್ದು ಮತ್ತು ತಪಾಸಣೆ ವರದಿಯನ್ನು ಸ್ಕೆಚಿನ ಜೊತೆಯಲ್ಲಿ ನಿಗದಿತ ಸ್ವರೂಪದಲ್ಲಿ ಕೆಐಎಡಿಬಿ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡತಕ್ಕದ್ದು ಇಲ್ಲಿ ಕ್ಲಿಕ್ ಮಾಡಿ (ಸರ್ಕಾರದ ಸುತ್ತೋಲೆ ಸಂಖ್ಯೆ ಸಿಐ ೮ ಎಸ್‌ಪಿಐ ೨೦೧೫ ದಿನಾಂಕ ೩೦/೪/೨೦೧೫ ಮತ್ತು ಕೆಐಎಡಿಬಿ ಸುತ್ತೋಲೆ ಸಂಖ್ಯೆ ಕೆಐಎಡಿಬಿ/ಜೆಡಿಟಿಪಿ/೫೫/೨೦೧೬-೧೭ ದಿನಾಂಕ ೧/೪/೨೦೧೬ ರ ಪ್ರಕಾರ).
  4. ಅನುಮೋದನೆಯ ನಂತರ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ವಾಸ ಪ್ರಮಾಣಪತ್ರವನ್ನು ಸೀಲ್ ಮತ್ತು ಸಹಿಯೊಂದಿಗೆ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಪಿ1-ಅಭಿವೃದ್ಧಿ ಯೋಜನೆಯ ಮತ್ತು ಕಟ್ಟಡ ನಕ್ಷೆಯ ಪರಿಶೀಲನೆ ಮತ್ತು ಅನುಮೋದನೆ

ಪಿ2- ಆರಂಭ ಮತ್ತು ಸ್ವಾಧೀನ ಪತ್ರ ನೀಡುವಿಕೆ