ನೀರು ಸರಬರಾಜು

ಕ್ರಮಸಂಖ್ಯೆ ವಿವರ
1 ಇನ್ನು ಮುಂದೆ ಉದ್ಯಮಿಗಳು ನೀರು ಸರಬರಾಜು ಸಂಪರ್ಕಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆದ್ದರಿಂದ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಕೋರಲಾಗಿದೆ.
2 ಹಂಚಿಕೆ ಪಡೆದವರು/ಅರ್ಜಿದಾರರು ಈ ಕೆಳಕಂಡ ದಾಗಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅವುಗಳೆಂದರೆ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಎಸ್.ಹೆಚ್.ಎಲ್.ಸಿ.ಸಿ./ ಎಸ್.ಎಲ್.ಎಸ್.ಡಬ್ಲ್ಯೂ.ಸಿ.ಸಿ/ ಡಿ.ಎಲ್.ಎಸ್.ಡಬ್ಲ್ಯೂ.ಸಿ.ಸಿ ಯಿಂದ ಅನುಮೋದಿತ ಪ್ರಮಾಣದ ನೀರು ಸರಬರಾಜು, ಅಗತ್ಯವಿರುವ ನೀರು ಸರಬರಾಜಿನ ಪ್ರಮಾಣ/ಪ್ರತಿದಿನ ಲೀಟರ್ ನಲ್ಲಿ ಮತ್ತು ಅಗತ್ಯವಿರುವ ಸಂಪರ್ಕದ ಗಾತ್ರ ಈ ಮಾಹಿತಿಯೊಂದಿಗೆ ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಮತ್ತು ಆಯಾ ಕೈಗಾರಿಕೋದ್ಯಮ ಪ್ರದೇಶದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಸಲ್ಲಿಸುವುದು.
3 ಡಿ.ಒ.ಇ.ಇ ಅವರು ಕೈಗಾರಿಕೋದ್ಯಮ ಪ್ರದೇಶಕ್ಕೆ ಸಂಬಂಧಿಸಿದ ಡಿ.ಡಿ.ಒ ಮತ್ತು ಎ.ಇ.ಇ ಮತ್ತು ಎ.ಇ ಅವರಿಂದ ವರದಿ ತರಿಸಿಕೊಂಡಿ ಅರ್ಜಿದಾರರೊಂದಿಗೆ ಸಂಬಂಧಿಸಿದವುಗಳನ್ನು ಪರಿಶೀಲಿಸಿ ಸ್ಥಳ ಪರೀಕ್ಷೆಯ ನಂತರ ನೀರು ಸರಬರಾಜು ಸಂಪರ್ಕಕ್ಕೆ ಅಗತ್ಯವಿರುವ ವೆಚ್ಚಗಳಾದ ಸರ್ತೆ ಕಡಿತ, 3 ತಿಂಗಳ ರಕ್ಷಣಾ ಠೇವಣಿ ಮತ್ತು ಆರಂಭಿಕ ಠೇವಣಿ ಮೊತ್ತದ ಡಿಮಾಂಡ್ ನೋಟ್ ನ್ನು ಡಿ.ಒ ಮತ್ತು ಇ.ಇ ಯವರಿಂದ ಅರ್ಜಿದಾರರಿಗೆ ನೀಡಲಾಗುವುದು.
4 ಅರ್ಜಿದಾರರು ಒಪ್ಪಂದವನ್ನು ರೂ.100 (ನೂರು ರೂಪಾಯಿಗಳ) ಚಾಪಾ ಕಾಗದದಲ್ಲಿ ಒಪ್ಪಂದವನ್ನು ಮಾಡಿಸಿ ಜಾರಿಕೊಳಿಸುವುದಾಗಿದೆ
5 ಒಪ್ಪಂದವನ್ನು ಜಾರಿಗೊಳಿಸಿದ ನಂತರ ಡಿ.ಒ ಮತ್ತು ಇ.ಇ ಅವರು ಅಲ್ಟ್ರಾಸೋನಿಕ್ ನೀರಿನ ದರ ಮೀಟರ್ ಅಳವಡಿಸಲು ಕಾರ್ಯಾದೇಶ ನೀಡಿ ನಂತರ ಪರವಾನಿಗೆ ಇರುವ ನಲ್ಲಿ ಕೆಲಸದವರಿಂದ ಅಗತ್ಯ ಸಂಪರ್ಕ ಕಾರ್ಯಗಳನ್ನು ಕೈಗೊಳ್ಳುವುದಾಗಿದೆ.