ಕರ್ನಾಟಕ ಕೈಗಾರಿಕೋದ್ಯಮ ಭೂಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ರಾಜ್ಯಾದ್ಯಂತ ಕೈಗಾರಿಕೋದ್ಯಮ ಅಭಿವೃದ್ಧಿ ಪಡಿಸಲು ಮತ್ತು ಅರ್ಹ ಉದ್ಯಮಿಗಳಿಗೆ ಭೂ ಪ್ರದೇಶವನ್ನು ಹಂಚಲು ಜಮೀನನ್ನು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದೆ. ಕಾಯ್ದೆಯ ಪ್ರಕಾರ ಭೂ ಮಾಲೀಕರಿಗೆ ಭೂ ಪರಿಹಾರವನ್ನು ಒಪ್ಪಂದದ ದರಗಳಂತೆ ಪಾವತಿಮಾಡಲಾಗಿದೆ. ಮುಂದುವರೆದಂತೆ ಸ್ವಾಧೀನ ಪಡಿಸಿಕೊಂಡ ಭೂ ಪ್ರದೇಶದಲ್ಲಿರುವ ಮಲ್ಕೀಸಗಳು ಮತ್ತು ರಚನೆ (ಕಟ್ಟಡ)ಗಳಿಗೆ ಸಂಬಂಧಪಟ್ಟ ಇಲಾಖೆ ಮೌಲ್ಯ ನಿರ್ಧರಿಸಿದಂತೆ ಪರಿಹಾರ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಹಿಂದಿನ ಭೂ ಮಾಲೀಕರುಗಳು ಒಪ್ಪಂದದ ದರಗಳನ್ನು ಒಪ್ಪಿಕೊಂಡಿರುವುದಿಲ್ಲ. ಅಂಥವರಿಗೆ ತೀರ್ಪು ನೀಡಿ ಅದಕ್ಕೆ ತಕ್ಕ ಮೊತ್ತವನ್ನು ದಿವಾಣಿ ನ್ಯಾಯಾಲಯದಲ್ಲಿ ಠೇವಣಿ ಮಾಡಲಾಗುವುದು.
ಆದರೆ ಹಿಂದಿನ ಕೆಲವು ಭೂಮಾಲೀಕರು ದಿವಾಣಿ ನ್ಯಾಯಾಲಯ ಹೆಚ್ಚಿಸಿದ ಹೆಚ್ಚಿನ ಪರಿಹಾರವನ್ನು ಪಡೆದು ಕೊಂಡ ಕೈಗಾರಿಕೋದ್ಯಮ ಚಟುವಟಿಕೆಗಳು / ನಾಗರೀಕ ಸೇವೆಗಳು ನಡೆಯದಂತೆ ನಿರ್ಬೇಧಿಸುತ್ತಿದ್ದಾರೆ. ಅವರಿಗೆ ಒಪ್ಪಂದದ ದರಗಳಿಗಿಂತ ಕಡಿಮೆ ಪರಿಹಾರ ನೀಡಿದ್ದಾರೆ ಎಂದು ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಅನೇಕ ಕೈಗಾರಿಕೋದ್ಯಮಗಳು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಪ್ರಕರಣಗಳನ್ನು ಪರಿಹರಿಸಬೇಕೆಂದು ಕೋರುತ್ತಿದ್ದಾರೆ.
ಅದರಂತೆ ಉದ್ಯಮಿಗಳು ತಮ್ಮ ತಮ್ಮ ಯೋಜನೆಗಳನ್ನು ಅವರಿಗೆ ಹಂಚಿಕೆಯಾದ ಪ್ರದೇಶದಲ್ಲಿ ಜಾರಿಗೊಳಿಸಲು ಯಾವುದೇ ರೀತಿಯ ತೊಂದರೆಯಾಗದಂತೆ ಅವಕಾಶಗಳನ್ನು ಕಲ್ಪಿಸುವ ದೃಷ್ಟಿಯಿಂದ ದೂರು ಪರಿಹಾರ ಪ್ರಾಧಿಕಾರವನ್ನು ರಚಿಸಲಾಗಿದೆ ಮತ್ತು ಅವರಿಗೆ ಉದ್ಯಮಿಗಳಿಗೆ ಅವರ ಪರವಾಗಿ ಹಂಚಿಕೆಯಾದ ಭೂಪ್ರದೇಶಗಳ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರ ನೀಡಲಾಗಿದೆ:
ಕ್ರಮ ಸಂಖ್ಯೆ | ದೂರು | ಪ್ರಾಧಿಕಾರ |
---|---|---|
1. | ಹಂಚಿಕೆ /ಅಭಿವೃದ್ಧಿಗೆ ಸಂಬಂಧಸಿದ ವಿಷಯಗಳು/ಸಮಸ್ಯೆಗಳು | ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯನಿರ್ವಹಾಕ ಅಭಿಯಂತರರು |
2. | ಭೂ ಸ್ವಾಧೀನತೆಗೆ ಸಂಬಂಧಿಸಿದ ವಿಷಯಗಳು | ವಿಶೇಷ ಭೂಸ್ವಾಧೀನ ಅಧಿಕಾರಿ. |
ಕ್ರಮ ಸಂಖ್ಯೆ | ದೂರು | ಪ್ರಾಧಿಕಾರ |
---|---|---|
1. | ಹಂಚಿಕೆಗೆ ಸಂಬಂಧಿಸಿದ ವಿಷಯಗಳು | ಕಾರ್ಯದರ್ಶಿ/ಜಂಟಿ ನಿರ್ದೇಶಕರು |
2. | ಅಭಿವೃದ್ಧಿ /ಬೆಳವಣಿಗೆಗೆ ಸಂಬಂಧಿಸಿ ವಿಷಯಗಳು | ಮುಖ್ಯ ಅಭಿವೃದ್ಧಿ ಅಧಿಕಾರಿ ಮತ್ತು ಮುಖ್ಯ ಇಂಜಿನಿಯರು |
3. | ಭೂ ಸ್ವಾಧೀನತೆಗೆ ಸಂಬಂಧಿಸಿದ ವಿಷಯಗಳು | ವಿಶೇಷ ಉಪ ಆಯುಕ್ತರು |
ಕ್ರಮ ಸಂಖ್ಯೆ | ಪ್ರಾಧಿಕಾರ |
---|---|
1. | ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕ ಸದಸ್ಯರು |
ಈ ಮೇಲ್ಕಂಡ ಪ್ರಾಧಿಕಾರಿಗಳಲ್ಲಿ ಕಳಕಳಿಯ ಮನವಿ ಎಂದರೆ ನೀವು ಜೇಷ್ಟತೆಯ ಆಧಾರದ ಮೇಲೆ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಸರ ಸ್ನೇಹಿ ವಾತಾವರಣ ನಿರ್ವಹಿಸುವುದಾಗಿದೆ.