ನೀತಿಗಳು

ಅಬಾಧ್ಯತೆ

ಈ ಪೋರ್ಟಲ್ ನಲ್ಲಿ ಹಾಕಿರುವ ಮಾಹಿತಿ ಮತ್ತು ವಿಷಯಗಳನ್ನು ಹಾಕಲು ಕಾಳಜಿ ಮತ್ತು ಶ್ರದ್ಧೆಯನ್ನು ವಹಿಸಿದೆ, ಕೆಐಎಡಿಬಿ ಈ ಮಾಹಿತಿಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಅಥವಾ ಅದರ ಬಳಕೆಯ ಪರಿಣಾಮಕ್ಕೆ ಜವಬ್ದಾರಿ ತೆಗೆದುಕೊಳ್ಳುವುದಿಲ್ಲ. ಇದರಲ್ಲಿ ಯಾವುದೇ ರೀತಿಯ ಅಸಮಂಜಸತೆ ಅಥವಾ ಗೊಂದಲ ಇದ್ದಲ್ಲಿ, ಮತ್ತಷ್ಟು ಸ್ಪಷ್ಟೀಕರಣ ಬೇಕಾದಲ್ಲಿ ಬಳಕೆದಾರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಬೇಕು.

ಹೈಪರ್ಲಿಂಕಿಂಗ್ ಪಾಲಿಸಿಗಳು

ಬಾಹ್ಯ ವೆಬ್‌ಸೈಟ್/ಪೋರ್ಟಲ್ ಗಳಿಗೆ ಲಿಂಕ್‌ಗಳು

ಈ ಪೋರ್ಟಲ್ ಹಲವು ಸ್ಥಳಗಳಲ್ಲಿ ನೀವು ಇತರೆ ಸರ್ಕಾರ ಅಥವಾ ಸರ್ಕಾರ ಅಲ್ಲದ/ಖಾಸಗಿ ಸಂಸ್ಥೆಗಳು ರಚಿಸಿ ಮತ್ತು ನಿರ್ವಹಣೆ ಮಾಡುವ ಹಲವಾರು ಇತರೆ ವೆಬ್‌ಸೈಟ್/ಪೋರ್ಟಲ್‌ಗಳಿಗೆ ಲಿಂಕ್‌ಗಳು ಸಿಗುತ್ತದೆ. ಈ ಲಿಂಕ್‌ಗಳು ನಿಮ್ಮ ಅನುಕೂಲತೆಗೆ ತಕ್ಕಂತೆ ಇರಿಸಲಾಗಿರುತ್ತದೆ. ನೀವು ಆ ಲಿಂಕ್‌ನನ್ನು ಆಯ್ಕೆ ಮಾಡಿದಲ್ಲಿ ನಿಮಗೆ ಆ ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುತ್ತದೆ. ನೀವು ಆ ವೆಬ್‌ಸೈಟ್‌ಗೆ ಹೋದಲ್ಲಿ ನೀವು ಆ ವೆಬ್‌ಸೈಟ್‌ನ ಮಾಲೀಕರು/ಪ್ರಾಯೋಜಕರ ಗೌಪ್ಯತೆ ಮತ್ತು ಭದ್ರತಾ ಪಾಲಿಸಿಗಳಿಗೆ ಒಳಪಟ್ಟಿರುತ್ತೀರಿ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಅದರ ವಿಷಯಗಳು ಮತ್ತು ವಿಶ್ವಾಸರ್ಹತೆಗೆ ಯಾವುದೇ ಜವಬ್ದಾರಿ ತೆಗೆದುಕೊಳ್ಳುವುದಿಲ್ಲ ಮತ್ತು ಆ ವೆಬ್‌ಸೈಟ್‌ನಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಕೇವಲ ಅದರ ಲಿಂಕ್ ಅಥವಾ ಈ ಪೋರ್ಟಲ್‌ನಲ್ಲಿ ಅದರ ಲಿಸ್ಟಿಂಗ್ ಆದ ಕಾರಣ ಅದು ಯಾವುದೇ ರೀತಿಯ ಒಪ್ಪಿಗೆ ಆಗುವುದಿಲ್ಲ.

ಇತರೆ ವೆಬ್‌ಸೈಟ್/ಪೋರ್ಟಲ್‌ಗಳಿಂದ ಈ ಪೋರ್ಟಲ್‌ಗೆ ಲಿಂಕ್

ನಮ್ಮ ಸೈಟ್‌ನಲ್ಲಿರುವ ಮಾಹಿತಿಯನ್ನು ನೇರವಾಗಿ ಲಿಂಕ್ ಮಾಡಿದಲ್ಲಿ ನಮಗೆ ಯಾವುದೇ ರೀತಿಯ ಆಕ್ಷೇಪಣೆ ಇರುವುದಿಲ್ಲ ಮತ್ತು ಯಾವುದೇ ರೀತಿಯ ಪೂರ್ವಾನುಮತಿಯ ಅಗತ್ಯ ಇರುವುದಿಲ್ಲ. ನಾವು ನಿಮ್ಮ ಸೈಟಿನ ಫ್ರೇಮ್‌ನಲ್ಲಿ ನಮ್ಮ ಪೇಜ್‌ಗಳು ಲೋಡ್ ಮಾಡಲು ಅನುಮತಿ ನೀಡುವುದಿಲ್ಲ. ನಮ್ಮ ಪೇಜ್‌ಗಳು ಬಳಕೆದಾರ ಹೊಸದಾಗಿ ತೆರೆಯಲಾದ ಬ್ರೌಸರ್ ವಿಂಡೋದಲ್ಲಿ ಮಾತ್ರ ಲೋಡ್ ಆಗಬೇಕು.

ನಿಯಮ ಮತ್ತು ಷರತ್ತುಗಳು

ಈ ವೆಬ್‌ಸೈಟ್‌ನನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುತ್ತಿದೆ. ಈ ಪೋರ್ಟಲ್‌ನಲ್ಲಿರುವ ವಿಷಯಗಳನ್ನು ಕೆಐಎಡಿಬಿ ಒದಗಿಸುತ್ತದೆ ಮತ್ತು ಈ ಪೋರ್ಟಲ್‌ಗೆ ಪ್ರವೇಶ ಪಡೆದಲ್ಲಿ ನೀವು ಈ ಪೋರ್ಟಲ್‌ನ ನಿಯಮ ಮತ್ತು ಷರತ್ತುಗಳನ್ನು ಕಾನೂನುಬದ್ಧವಾಗಿ ಮತ್ತು ಬೇಷರತ್ತಾಗಿ ಒಪ್ಪಿಕೊಳ್ಳುತ್ತೀರ. ನೀವು ಹೇಳಿದ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳದೇ ಇದ್ದಲ್ಲಿ, ಪೋರ್ಟಲ್ ನಿಮಗೆ ಪ್ರವೇಶ ನೀಡುವುದಿಲ್ಲ. ಈ ಪೋರ್ಟಲ್‌ನಲ್ಲಿರುವ ಎಲ್ಲಾ ವಿಷಯಗಳನ್ನು ನಿಖರವಾಗಿರಿಸಲು ಮತ್ತು ನವೀಕರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನ ಮಾಡಲಾಗಿದೆ, ಆದರೆ, ಅದನ್ನು ಕಾನೂನಿನ ಹೇಳಿಕೆ ಎಂದು ವ್ಯಾಖ್ಯಾನಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗೆ ಬಳಸಬಾರದು. ಬಳಕೆದಾರರಿಗೆ ಯಾವುದೇ ರೀತಿಯ ಅಸ್ಪಷ್ಟತೆ ಅಥವಾ ಗೊಂದಲ ಇದ್ದಲ್ಲಿ ಬೇರೆ ಮೂಲಗಳಿಂದ ಪರಿಶೀಲಸಲು ಸಲಹೆ ನೀಡಲಾಗಿದೆ. ಯಾವುದೇ ಸಂದರ್ಭಗಳಲ್ಲಿ ಈ ಪೋರ್ಟಲ್ ಬಳಕೆಯಿಂದ ಯಾವುದೇ ನಷ್ಟ ಅಥವಾ ಹಾನಿಗೆ ಆಗಿದಲ್ಲಿ ಅದಕ್ಕೆ ಕೆಐಎಡಿಬಿ ಜವಬ್ದಾರನಾಗುವುದಿಲ್ಲ. ಈ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಭಾರತೀಯ ಕಾನುನಿನ ಪ್ರಕಾರ ಆಡಳಿತ ಮತ್ತು ನಿರ್ಭಂದಗೊಳಿಸಲಾಗಿದೆ. ಈ ನಿಯಮ ಮತ್ತು ಷರತ್ತುಗಳಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ವಿವಾದ ಉಂಟಾದಲ್ಲಿ ಅದು ಭಾರತೀಯ ನ್ಯಾಯಲಯದ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಗೌಪ್ಯತೆ ಪಾಲಿಸಿ

ಸಮಾನ್ಯ ನಿಯಮದ ಪ್ರಕಾರ, ಈ ಪೋರ್ಟಲ್ ನಿಮ್ಮ ನಿರ್ದಿಷ್ಟ ವೈಯಕ್ತಿಕ ಮಾಹಿತಿಯನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯುವುದಿಲ್ಲ, (ನಿಮ್ಮ ಹೆಸರು, ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸ), ಅದು ನಮಗೆ ನಿಮ್ಮನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಈ ಪೋರ್ಟಲ್ ನಿಮ್ಮ ಭೇಟಿಗಳನ್ನು ದಾಖಲಿಸುತ್ತದೆ ಮತ್ತು ಈ ಕೆಳಗಿನ ಮಾಹಿತಿಗಳಾದ ಇಂಟರ್‌ನೆಟ್ ಪ್ರೊಟೊಕಾಲ್ (ಐಪಿ) ವಿಳಾಸ, ಡೊಮೈನ್ ಹೆಸರು, ಬ್ರೌಸರ್ ರೀತಿ, ಆಪರೇಟಿಂಗ್ ಸಿಸ್ಟಂ, ಭೇಟಿ ದಿನಾಂಕ ಮತ್ತು ಸಮಯವನ್ನು ಸಂಖ್ಯಾಶಾಸ್ತ್ರದ ಉದ್ದೇಶದಿಂದ ಲಾಗ್ ಮಾಡುತ್ತದೆ.

ಕೃತಿಸ್ವಾಮ್ಯ (ಕಾಪಿರೈಟ್) ಪಾಲಿಸಿ

ಈ ಪೋರ್ಟಲ್‌ನಲ್ಲಿ ವೈಶಿಷ್ಟ್ಯಗೊಳಿಸಿದ ವಸ್ತುಗಳನ್ನು ಯಾವುದೇ ಸ್ವರೂಪದಲ್ಲಿ ಪುನರುತ್ಪಾದನೆಯನ್ನು ಉಚಿತವಾಗಿ ಮಾಡಬಹುದು ಮತ್ತು ಇದಕ್ಕೆ ಯಾವುದೇ ರೀತಿಯ ನಿರ್ದಿಷ್ಟ ಅನುಮತಿ ಬೇಕಾಗಿರುವುದಿಲ್ಲ. ಈ ವಸ್ತು ಅಥವಾ ವಿಷಯವನ್ನು ನಿಖರವಾಗಿ ಪುನರುತ್ಪಾದನೆ ಮಾಡಬಹುದು ಮತ್ತು ಇದನ್ನು ಅವಹೇಳನಕಾರಿ ವಿಧಾನದಲ್ಲಿ ಅಥವಾ ತಪ್ಪು ಮುನ್ನಡೆ ಮಾಡುವ ರೀತಿಯಲ್ಲಿ ಬಳಸಬಾರದು. ಈ ವಿಷಯವನ್ನು ಬೇರೆಕಡೆ ಪ್ರಕಟಿಸಿದಲ್ಲಿ ಅಥವಾ ನೀಡಿದಲ್ಲಿ ಪ್ರಮುಖವಾಗಿ ಅಂಗೀಕರಿಸಬೇಕು. ಆದರೆ, ವಿಷಯವನ್ನು ಪುನರುತ್ಪಾದನೆ ಅನುಮತಿ ಮೂರನೇ ಪಾರ್ಟಿಯ ಕೃತಿಸ್ವಾಮ್ಯ ಗುರುತಿಸಿದಲ್ಲಿ ಅದಕ್ಕೆ ವಿಸ್ತರಿಸುವುದಿಲ್ಲ. ಅದನ್ನು ಪುನರುತ್ಪಾದನೆ ಮಾಡುವುದಕ್ಕೆ ಸಂಬಂಧಪಟ್ಟ ಕೃತಿಸ್ವಾಮ್ಯ ಹೊಂದಿರುವುವನ ಹತ್ತಿರ ಅಧಿಕಾರ ಪಡೆದುಕೊಳ್ಳಬೇಕು