ಅಭಿವೃದ್ಧಿ ಯೋಜನೆಗೆ ಅರ್ಜಿ/ಕಟ್ಟಡ ಯೋಜನೆ ಅನುಮೋದನೆ ಮತ್ತು ಪ್ರಾರಂಭಿಕ ಪ್ರಮಾಣಪತ್ರ ವಿತರಣೆ ಮತ್ತು ವಾಸ ಪ್ರಮಾಣಪತ್ರಕ್ಕೆ ಕೆಐಎಡಿಬಿ ವೆಬ್ ಪೋರ್ಟಲ್ ನಲ್ಲಿರುವ ಆನ್‌ಲೈನ್ ಮೆಕಾನಿಸಂ ಬಳಸಿ ಸಲ್ಲಿಸತಕ್ಕದ್ದು (www.kiadb.in)
ಕ್ರಮಸಂಖ್ಯೆ |
ವಿವರಗಳು |
(a) |
ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆ
- ಮಂಜೂರಾತಿದಾರ/ಅರ್ಜಿದಾರ ಸೂಕ್ತ ದಾಖಲೆಗಳು/ಅಗತ್ಯದ ಪ್ರಕಾರ ನಿರಾಪೇಕ್ಷಣೆ ಪತ್ರವನ್ನು ಅರ್ಜಿ ಜೊತೆಯಲ್ಲಿ ಸಲ್ಲಿಸಬೇಕು.(ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ (www.kiadb.in)
- ಅಭಿವೃದ್ಧಿ ಯೋಜನೆಗೆ/ಕಟ್ಟಡ ಯೋಜನೆ ಅನುಮೋದನೆಗೆ ಅಗತ್ಯವಿರುವ ನಿರಾಪೇಕ್ಷಣಾ ಪತ್ರ/ಅನುಮೋದನೆ ಪತ್ರವನ್ನು ಸಂಬಂಧಪಟ್ಟ ಇಲಾಖೆ/ಮಂಡಳಿ/ಪ್ರಾಧಿಕಾರವನ್ನು ಕೆಳಗೆ ನೀಡಿರುವ ಆನ್‌ಲೈನ್ ಲಿಂಕ್ಸ್‌ಗಳನ್ನು ಬಳಸಿ ಸಂಪರ್ಕಿಸಬೇಕು. (ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ (www.kiadb.in)
- ಕಟ್ಟಡ ಯೋಜನೆ ಅನುಮೋದನೆಗೆ ನಿಗದಿತ ಶುಲ್ಕವನ್ನು ಇ-ಪೇಮೆಂಟ್ಸ್ ಬಳಸಿ ಮಾತ್ರ ಪಾವತಿ ಮಾಡತಕ್ಕದ್ದು (ರೂ. ೧ ರಿಂದ ರೂ. ೫೦೦ ಕೋಟಿವರೆಗಿನ ಮೊತ್ತವನ್ನು ಅರ್.ಟಿ.ಜಿ.ಎಸ್/ಎನ್.ಇ.ಎಫ್.ಟ್/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಬಳಸಿ ಪಾವತಿಸಬಹುದು).
- ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆಯ ಒಂದು ಪ್ರತಿಯನ್ನು ಸಂಬಂಧಪಟ್ಟ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿಗೆ ಅನುಮೋದನೆಗೆ ಸಲ್ಲಿಸಬೇಕು.
- ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆಯನ್ನು ಕೆಐಎಡಿಬಿಯ ಸಮಿತಿಯಲ್ಲಿ ಸೇರ್ಪಡೆಯಾಗಿರುವ ಆರ್ಕಿಟೆಕ್‌ಟ್ಸ್/ಇಂಜಿನಿಯರ್‌ಗಳು/ನಿರ್ಮಾಣ ಇಂಜಿನಿಯರ್‌ಗಳು/ನಗರ ಯೋಜಕರು ಅದನ್ನು ತಯಾರಿಸಿ ಮತು ಅವರ ಸಹಿ ಮತ್ತು ಸೀಲ್ ಹಾಕಿ ಸಲ್ಲಿಸತಕ್ಕದ್ದು.(www.kiadb.in)
- ನಿರ್ದಿಷ್ಟ ಪಡಿಸಿದ ಸಮಯದಲ್ಲಿ ಪ್ರಸ್ತಾಪಿಸಿದ ಪ್ಲಾಟಿನ ತಪಾಸಣೆಯನ್ನು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಮಾಡತಕ್ಕದ್ದು ಮತ್ತು ತಪಾಸಣೆ ವರದಿಯನ್ನು ಸ್ಕೆಚಿನ ಜೊತೆಯಲ್ಲಿ ನಿಗದಿತ ಸ್ವರೂಪದಲ್ಲಿ ಕೆಐಎಡಿಬಿ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡತಕ್ಕದ್ದು. ಇಲ್ಲಿ ಕ್ಲಿಕ್ ಮಾಡಿ(ಸರ್ಕಾರದ ಸುತ್ತೋಲೆ ಸಂಖ್ಯೆ ಸಿಐ ೮ ಎಸ್‌ಪಿಐ ೨೦೧೫ ದಿನಾಂಕ ೩೦/೪/೨೦೧೫ ಮತ್ತು ಕೆಐಎಡಿಬಿ ಸುತ್ತೋಲೆ ಸಂಖ್ಯೆ ಕೆಐಎಡಿಬಿ/ಜೆಡಿಟಿಪಿ/೫೫/೨೦೧೬-೧೭ ದಿನಾಂಕ ೧/೪/೨೦೧೬ ರ ಪ್ರಕಾರ).
- ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆ ಅನುಮೋದನೆಯಾದ ನಂತರ, ಅನುಮೋದನೆ ಪತ್ರದ ಜೊತೆಯಲ್ಲಿ ಅಭಿವೃದ್ಧಿ ಯೋಜನೆ/ಕಟ್ಟಡ ಯೋಜನೆ ಅನುಮೋದನೆ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಸೀಲ್ ಮತ್ತು ಸಹಿಯೊಂದಿಗೆ ಅಪ್‌ಲೋಡ್ ಮಾಡತಕ್ಕದ್ದು.(ದೃಢೀಕರಿಸಿದ ನಕಲು ೩ ಪ್ರತಿಗಳಲ್ಲಿ ಒಂದು ಪ್ರತಿಯನ್ನು ವಲಯ ಕಚೇರಿಯಲ್ಲಿ ಉಳಿಸಿಕೊಳ್ಳಬೇಕು, ಒಂದು ಪ್ರತಿಯನ್ನು ಮುಖ್ಯ ಅಭಿವೃದ್ಧಿ ಅಧಿಕಾರಿಗೆ ಮತ್ತು ಮುಖ್ಯ ಇಂಜಿನಿಯರ್ ವಿಭಾಗಕ್ಕೆ ಜೆಡಿಟಿಪಿ ಎಂದು ಗುರುತಿಸಿ ಕಳುಹಿಸತಕ್ಕದ್ದು ಮತ್ತು ಒಂದನ್ನು ಮಂಜೂರಾತಿದಾರ/ಅರ್ಜಿದಾರನಿಗೆ ಮರಳಿ ನೀಡತಕ್ಕದ್ದು.)
|
(b) |
ಪ್ರಾರಂಭಿಕ ಪ್ರಮಾಣಪತ್ರ ಮತ್ತು ವಾಸ ಪ್ರಮಾಣಪತ್ರ:
- ಮಂಜೂರಾತಿದಾರ/ಅರ್ಜಿದಾರ ಸೂಕ್ತ ದಾಖಲೆಗಳು/ಅಗತ್ಯದ ಪ್ರಕಾರ ನಿರಾಪೇಕ್ಷಣೆ ಪತ್ರವನ್ನು ಅರ್ಜಿ ಜೊತೆಯಲ್ಲಿ ಸಲ್ಲಿಸಬೇಕು.(ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ (www.kiadb.in)
- ನಿರಾಪೇಕ್ಷಣಾ ಪತ್ರಕ್ಕೆ/ಅನುಮೋದನೆ ಪತ್ರಕ್ಕೆ ಸಂಬಂಧಪಟ್ಟ ಇಲಾಖೆ/ಮಂಡಳಿ/ಪ್ರಾಧಿಕಾರವನ್ನು ಕೆಳಗೆ ನೀಡಿರುವ ಆನ್‌ಲೈನ್ ಲಿಂಕ್ಸ್‌ಗಳನ್ನು ಬಳಸಿ ಸಂಪರ್ಕಿಸಬೇಕು.(ದಯವಿಟ್ಟು ಕೆಐಎಡಿಬಿ ಆನ್‌ಲೈನ್ ಪೋರ್ಟಲ್ ಭೇಟಿ ನೀಡಿ(www.kiadb.in)
- ನಿರ್ದಿಷ್ಟ ಪಡಿಸಿದ ಸಮಯದಲ್ಲಿ ಪ್ರಸ್ತಾಪಿಸಿದ ಪ್ಲಾಟಿನ ತಪಾಸಣೆಯನ್ನು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಮಾಡತಕ್ಕದ್ದು ಮತ್ತು ತಪಾಸಣೆ ವರದಿಯನ್ನು ಸ್ಕೆಚಿನ ಜೊತೆಯಲ್ಲಿ ನಿಗದಿತ ಸ್ವರೂಪದಲ್ಲಿ ಕೆಐಎಡಿಬಿ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡತಕ್ಕದ್ದು ಇಲ್ಲಿ ಕ್ಲಿಕ್ ಮಾಡಿ (ಸರ್ಕಾರದ ಸುತ್ತೋಲೆ ಸಂಖ್ಯೆ ಸಿಐ ೮ ಎಸ್‌ಪಿಐ ೨೦೧೫ ದಿನಾಂಕ ೩೦/೪/೨೦೧೫ ಮತ್ತು ಕೆಐಎಡಿಬಿ ಸುತ್ತೋಲೆ ಸಂಖ್ಯೆ ಕೆಐಎಡಿಬಿ/ಜೆಡಿಟಿಪಿ/೫೫/೨೦೧೬-೧೭ ದಿನಾಂಕ ೧/೪/೨೦೧೬ ರ ಪ್ರಕಾರ).
- ಅನುಮೋದನೆಯ ನಂತರ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ವಾಸ ಪ್ರಮಾಣಪತ್ರವನ್ನು ಸೀಲ್ ಮತ್ತು ಸಹಿಯೊಂದಿಗೆ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
|
ಪಿ1-ಅಭಿವೃದ್ಧಿ ಯೋಜನೆಯ ಮತ್ತು ಕಟ್ಟಡ ನಕ್ಷೆಯ ಪರಿಶೀಲನೆ ಮತ್ತು ಅನುಮೋದನೆ
ಪಿ2- ಆರಂಭ ಮತ್ತು ಸ್ವಾಧೀನ ಪತ್ರ ನೀಡುವಿಕೆ