ಪದೇ ಪದೇ ಕೇಳುವ ಪ್ರಶ್ನೆಗಳು

1. ಭೂ ಹಂಚಿಕೆಗೆ ಇರುವ ಪ್ರಕ್ರಿಯೆ/ಕಾರ್ಯವಿಧಾನ/ಮಾರ್ಗದರ್ಶಿಗಳೇನು?ಅವು ಯಾವುವು?
ವಿವರವಾದ ಮಾಹಿತಿಗಾಗಿಪ್ರಕ್ರಿಯೆ/ ಕಾರ್ಯವಿಧಾನ ನೋಡಿ
2. ಸಾಮಾನ್ಯವಾಗಿ ಕೈಗಾರಿಕೋದ್ಯಮ / ನಾಗರಿಕ ಸೌಕರ್ಯಗಳು ನಿವೇಶನಗಳನ್ನು ಯಾರು ಪಡೆಯಬಹುದು / ಯಾರಿಗೆ ಹಂಚಿಕೆಯಾಗಬಹುದು ?
ಭೂ ಕಾಯ್ದೆಯ ಪ್ರಕಾರ ಅರ್ಹರಾದ ಉದ್ಯಮಿ ಭೂಪ್ರದೇಶ ಹಂಚಿಕೆಗಾಗಿ ಅರ್ಜಿ ಸಲ್ಲಿಸಬಹುದು
3. ಕೈಗಾರಿಕೋದ್ಯಮ ಪ್ರದೇಶದಲ್ಲಿ ನಾಗರಿಕ ಸೌಲಭ್ಯಗಳಿಗೆ ವ್ಯವಸ್ಥೆ ಮಾಡಿರುತ್ತಾರೆಯೇ ?
ಕರ್ನಾಟಕ ಸರ್ಕಾರ ಅಧಿಸೂಚನೆ ಸಂಖ್ಯೆ ಸಿ186 ಎಸ್.ಪಿ.ಕ್ಯೂ90 ಬೆಂಗಳೂರು ದಿನಾಂಕ 13-3-1991ರಲ್ಲಿ ನಿರ್ಧಿಷ್ಟವಾಗಿ ಹೋಟೆಲ್, ಅಂಚೆಕಚೇರಿ, ವಾಣಿಜ್ಯ ಮಳಿಗೆ, ಆಸ್ಪತ್ರೆ, ಸಿನಿಮಾ ಮಂದಿರ, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ, ಶೈಕ್ಷಣಿಕ ಸಂಸ್ಥೆ, ರಜೆ ಸಮಯದ ವಿಹಾರಿ ರೆಸಾರ್ಟ್ ಇತ್ಯಾದಿಗಳನ್ನು ನಾಗರಿಕ ಸೌಲಭ್ಯಗಳಾಗಿ ಕೆ.ಐ.ಎ.ಡಿ.ಬಿ ಕೈಗಾರಿಕೋದ್ಯಮ ಪ್ರದೇಶದಲ್ಲಿ ಇವುಗಳನ್ನು ಸ್ಥಾಪನೆಗೆ ವ್ಯವಸ್ಥೆ ಮಾಡಿದೆ.
4. 4. ಐಕೈಕ ಘಟಕ ಮಳಿಗೆಗಾಗಿ ಭೂ ಪ್ರದೇಶ ಪಡೆಯಲು ಅನುಸರಸಿಬೇಕಾದ ಪ್ರಕ್ರಿಯೆ ಏನು ?
ವಿವರವಾದ ಮಾಹಿತಿಗಾಗಿ ಕಾರ್ಯವಿಧಾನ ನೋಡಿ.
5. ಕಟ್ಟಡ ನಕ್ಷೆಯನ್ನು ಅನುಮೋದನೆಗೆ ಸಲ್ಲಿಸಲು ನಿರ್ಧಿಷ್ಟ ಪಡಿಸಿದ ಸಮಯವೆಷ್ಟು
ವಿವರವಾದ ಮಾಹಿತಿಗಾಗಿ ಕಾರ್ಯವಿಧಾನ ನೋಡಿ
6. ಅನುಮೋದನೆಗೊಳ್ಳದೆ ಇರುವ ಕಟ್ಟಡವನ್ನು ನಿಮ್ಮ ಕಛೇರಿಯಿಂದ ಕಾನೂನುರಿತ್ಯಾ ಪಡೆಯಲು ಇರುವ ಅನುಕೂಲತೆಗಳು ಯಾವುವು ಮತ್ತು ಇದಕ್ಕೆ ಇರುವ ನಮೂನೆ ಮತ್ತು ವಿವರಗಳು ಯಾವುವು?
1966 ಕೆ.ಐ.ಎ.ಡಿ.ಬಿ ಅಧಿನಿಯಮದ ಪ್ರಕಾರ ಅನಧಿಕೃತ ಕಟ್ಟಡವನ್ನು ಅಧಿಕೃತಗೊಳಿಸಲು ಅವಕಾಶಗಳಿರುವುದಿಲ್ಲ. ಅಂದರೆ ಕಟ್ಟಡದ ನಕ್ಷೆ ಅನುಮೋದನೆ ಇಲ್ಲದೇ ಕಟ್ಟಿದ ಕಟ್ಟಡಗಳು. ಅದಾಗ್ಯೂ ಕ್ರಯಪತ್ರ ಜಾರಿಗೊಳಿಸುವ ಸಮಯದಲ್ಲಿ ಮಂಡಳಿಯು ಸೂಚಿಸಿರುವ ಕಟ್ಟಡದ ನಿಯಮಾವಳಿಗಳಲ್ಲಿ ಯಾವುದೇ ಚಿಕ್ಕ ಪುಟ್ಟ ಉಲ್ಲಂಘನೆಯನ್ನು ತಿಳಿದು ಅದರ ಪ್ರಕಾರ ದಂಡವಿಧಿಸುವರು.
7. ಕೆ.ಐ.ಎ.ಡಿ.ಬಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪಟ್ಟಿಯನ್ನು ಒದಗಿಸಿ
ಮಾಹಿತಿ ಹಕ್ಕು ಅಧಿನಿಯಮ ನೋಡಿ
8. ಭೂಪ್ರದೇಶದ ಸ್ವಾಧೀನ ಪಡೆದ ನಂತರ ಯೋಜನೆ ಜಾರಿಗೊಳಿಸಲು ಇರುವ ನಿಗದಿತ ಸಮಯ ಎಷ್ಟು?
ಸ್ವಾಧೀನ ಪತ್ರ ಪಡೆದ ಎರಡು ವರ್ಷಗಳ ಒಳಗೆ ಹಂಚಿಕೆಯಾದ ಕಂಪನಿ ಅವರ ಉದ್ದೇಶಿತ ಯೋಜನೆಯನ್ನು ಜಾರಿಗೊಳಿಸಬೇಕು.
9. ಹಂಚಿಕೆಯಾದ ಭೂ ಪ್ರದೇಶವನ್ನು ಬೇರೆ ಕಂಪನಿ / ಘಟಕಕ್ಕೆ ಉಪಭೋಗ್ಯ / ಉಪಗುತ್ತಿಗೆ ಮಾಡಲು ಅವಕಾಶಗಳು ಇವೆಯೇ ?
ಖಾಲಿ ಭೂ ಪ್ರದೇಶ ಅಥವಾ ನಿವೇಶನವನ್ನು ಉಪಬೋಗ್ಯ / ಉಪಗುತ್ತಿಗೆ ನೀಡಲು ಅವಕಾಶವಿರುವುದಿಲ್ಲ ಆದರೆ ಹಂಚಿಕೆಯಾದ ಭೂಪ್ರದೇಶದಲ್ಲಿ ಕಟ್ಟಿದ ಕಟ್ಟಡವನ್ನು ಉಪಬಂಧ ಕಲಂ 11(4) ಗುತ್ತಿಗೆ ಕ್ರಯ ಪತ್ರದ ಒಪ್ಪಂದದ ಅಡಿಯಲ್ಲಿ ಉಪಭೋಗ್ಯ ಕೊಡಬಹುದು.