ಕರ್ನಾಟಕ

ಕರ್ನಾಟಕವು ಭಾರತದ ದಕ್ಷಿಣ ಪಶ್ಚಿಮ ಪ್ರದೇಶದಲ್ಲಿರುವ ಒಂದು ರಾಜ್ಯವಾಗಿದೆ. ಇದು ಪ್ರಾಂತ ವಿಂಗಡನೆಯ ಮಸೂದೆಯ ಅಂಗೀಕಾರದ ಮೂಲಕ, 1 ನವೆಂಬರ್ 1956 ರಲ್ಲಿ ರಚನೆಯಾಯಿತು. ಮೂಲತಃ ಮೈಸೂರು

ರಾಜ್ಯ ಎಂದು ಕರೆಯಲಾಗುತ್ತಿದ್ದ ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಬೆಂಗಳೂರನ್ನು ರಾಜಧಾನಿಯಾಗಿಸಲಾಯಿತು. ಕರ್ನಾಟಕದ ಗಡಿಗಳಾಗಿ ವಾಯುವ್ಯದಲ್ಲಿ ಗೋವಾ,

ಉತ್ತರದಲ್ಲಿ ಮಹಾರಾಷ್ಟ್ರ, ಈಶಾನ್ಯದಲ್ಲಿ ತೆಲಂಗಾಣ, ಪೂರ್ವದಲ್ಲಿ ಆಂಧ್ರಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ಮತ್ತು, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಲಕ್ಯಾಡಿವ್ ಸಮುದ್ರಗಳನ್ನು

ಹೊಂದಿದೆ. ರಾಜ್ಯವು 191.976 ಚದರ ಕಿಲೋಮೀಟರ್ (74,122 ಚ ಮೈಲಿ) ವಿಸ್ತೀರ್ಣ ಹೊಂದಿದ್ದು, ಭಾರತದ ಒಟ್ಟು ಭೌಗೋಳಿಕ ವಲಯದಲ್ಲಿ 5.83 ರಷ್ಟು ಪ್ರದೇಶವನ್ನು ಆವರಿಸಿದೆ. ಇದು ವಿಸ್ತೀರ್ಣದಲ್ಲಿ ಏಳನೇ ಅತಿ

ದೊಡ್ಡ ಭಾರತೀಯ ರಾಜ್ಯವಾಗಿದೆ. 2011 ರ ಜನಗಣತಿಯ ಪ್ರಕಾರ 61.130.704 ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ 30 ಜಿಲ್ಲೆಗಳನ್ನು ಒಳಗೊಂಡು ಜನಸಂಖ್ಯೆಯಲ್ಲಿ ಎಂಟನೇ ದೊಡ್ಡ ರಾಜ್ಯವಾಗಿದೆ. ಭಾರತದ

ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ ಕನ್ನಡ ರಾಜ್ಯದ ವ್ಯಾಪಕ ಮತ್ತು ಅಧಿಕೃತ ಭಾಷೆಯಾಗಿದೆ.

 
 

ಕರ್ನಾಟಕ ಪದದ ಮೂಲದಬಗ್ಗೆ ಹಲವು ಅಭಿಪ್ರಾಯಗಳಿದ್ದರೂ ಸಾಮಾನ್ಯವಾಗಿ “ಕರು” ಮತ್ತು “ನಾಡು” ಸೇರಿ “ಎತ್ತರದ ಭೂಮಿ” ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ ಎನ್ನಲಾಗಿದೆ. ಕರು ಎಂದರೆ ಕಪ್ಪು,

ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಂಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಹೆಸರು ಬಂದಿದೆ ಎಂದೂ ಹೇಳಲಾಗುತ್ತದೆ. ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ

ಪ್ರದೇಶವಾದ್ದರಿಂದ ಬ್ರಿಟಿಷರ ಕಾಲದಲ್ಲಿ ಕಾರ್ನಾಟಿಕ್ ಅಥವಾ ಕರ್ನಾಟಕ ಹೆಸರು ಬಳಕೆಗೆ ಬಂತು.

 

ಶಿಲಾಯುಗದ ಹಿಂದಿನ ದಿನಕ್ಕೆ ವಿಸ್ತರಿಸಿರುವ ಇತಿಹಾಸವುಳ್ಳ ಕರ್ನಾಟಕ, ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಅತ್ಯಂತ ಪ್ರಬಲ ಸಾಮ್ರಾಜ್ಯಗಳ ಒಂದು ನೆಲೆಯಾಗಿದೆ. ತತ್ವಜ್ಞಾನಿಗಳು, ಆದಿಕವಿಗಳು ಈ ಸಾಮ್ರಾಜ್ಯಗಳನ್ನು

ಕೃತಿಗಳಲ್ಲಿ ವರ್ಣಿಸಿದ್ದು ಆಗ ಆರಂಭವಾದ ಸಾಮಾಜಿಕ-ಧಾರ್ಮಿಕ ಮತ್ತು ಸಾಕ್ಷರತಾ ಅಂದೋಲನಗಳು ಎಂದಿಗೂ ಮುಂದುವರೆದಿವೆ. ಭಾರತೀಯ ಸಂಗೀತ ಪದ್ಧತಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ

ಶಾಸ್ತ್ರೀಯ ಸಂಗೀತ ಎರಡೂ ರೂಪಗಳಲ್ಲಿ ಗಣನೀಯವಾಗಿ ಕೊಡುಗೆ ನೀಡಿದೆ.

 

ಕರ್ನಾಟಕ ಯಾವಾಗಲೂ ಭಾರತದಲ್ಲಿ ಕೈಗಾರಿಕಾ ಬೆಳವಣಿಗೆಯ ಮುಂಚೂಣಿಯಲ್ಲಿದ್ದುಕ್ಕೊಂಡಿದೆ. ಇಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯ ಮತ್ತು ಉದ್ಯಮಶೀಲ ನಾಗರಿಕರ ಪರಿಶ್ರಮ ಸೇರಿಕೊಂಡು, ಕರ್ನಾಟಕ ಬಂಡವಾಳ

ಅವಕಾಶಗಳಿಗೆ ಮಾದರಿಯಾಗಿದೆ ಮತ್ತು ಹಲವು ಆಯ್ಕೆಗಳನ್ನು ಒದಗಿಸುತ್ತದೆ:
 

  • ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಮತ್ತು ಮೂಲ ವಿಜ್ಞಾನ ತರಬೇತಿ, ತಾಂತ್ರಿಕತೆ ಹೊಂದಿರುವ ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ಒಳಗೊಂಡಿದೆ.
  •  

  • ಕೇಂದ್ರ ಸರ್ಕಾರದ ಪ್ರಯೋಗಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ರೂಪುಗೊಳ್ಳುವ ಉನ್ನತ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಕರ್ನಾಟಕದಲ್ಲಿ ಇದೆ.
  •  

  • ಪೂರಕ ಹವಾಮಾನ ಮತ್ತು ವಾಸಸ್ಥಾನ.
  •  

  • ಬ್ರಾಡ್ ಗೇಜ್ ರೈಲ್ವೆ, ವಿಮಾನ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಬಂದರುಗಳು ಒದಗಿಸಿದ ಅತ್ಯುತ್ತಮ ಸಂವಹನ ಸೌಲಭ್ಯಗಳ ಲಭ್ಯತೆ.
  •  

  • ಸಮರಸದ ಕೈಗಾರಿಕಾ ಸಂಬಂಧಗಳು.
  •