ತುಮಕೂರು ಯಂತ್ರೋಪಕರಣ ಉದ್ಯಾನದಲ್ಲಿ (ಟಿ.ಎಂ.ಟಿ.ಪಿ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ -24.03.2017

ಕರ್ನಾಟಕ ಸರ್ಕಾರ ಮೆ/ಸ್ ಟಿ.ಎಂ.ಟಿ.ಪಿಯನ್ನು 2013ರ ಕಂಪನಿ ಅಧಿನಿಯಮ ವಿಭಾಗ 8ರಡಿಯಲ್ಲಿ ಲಾಭ ರಹಿತ ಕಂಪನಿ ಎಂದು ಸ್ಥಾಪಿಸಿದೆ. ಇದು ಟಿ.ಎಂ.ಟಿ.ಪಿಗೆ ಕೆಳಕಂಡ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆಕರ್ಷಕ ತಿಂಗಳ ಸಂಬಂಳ(ಪ್ರತಿಫಲ)ದೊಂದಿಗೆ ಭರ್ತಿ ಮಾಡಲು ಯೋಜಿಸಿದೆ.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ತಾಂತ್ರಿಕ ಸಲಹೆಗಾರ:

ಈ ಹುದ್ದೆಗೆ ಭರ್ತಿ ಮಾಡುವ ಅಭ್ಯರ್ಥಿ ಇಂಜಿನಿಯರಿಂಗ್ ಹಿನ್ನಲೆಯನ್ನು ಹೊಂದಿದ್ದು ದೀರ್ಘಾವಧಿಯ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರಬೇಕು. ಅಭ್ಯರ್ಥಿಯು ಮುಖ್ಯ ಇಂಜಿನಿಯರ್ ಆಗಿ ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಅಥವಾ ಸರ್ಕಾರದ ಅಧೀನ ವಿಭಾಗಗಳಲ್ಲಿ 5 ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಿದವರಾಗಿರಬೇಕು. ಅವರು ಮುಖ್ಯ ಇಂಜಿನಿಯರ್ ಆಗಿ ರೂ.100 ಕೋಟಿಗಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ಕೈಗೊಂಡು ಕೆಲಸ ಮಾಡಿರಬೇಕು. ಪ್ರತಿಷ್ಠಿತ ವೇದಿಕೆಗಳಲ್ಲಿ ಜ್ಞಾನಭರಿತ ತಾಂತ್ರಿಕ ಪ್ರಬಂಧಗಳನ್ನು ಮಂಡಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೊಸ ಶೋಧನೆಗಳತ್ತ ದೃಷ್ಠಿ ಇರುವವರಾಗಿದ್ದು ತಮ್ಮ ಹೆಸರಿನಲ್ಲಿಯೇ ಪೇಟೆಂಟ್ ಹೊಂದಿದವರಾಗಿರಬೇಕು.

ಮುಖ್ಯ ತಾಂತ್ರಿಕ ಅಧಿಕಾರಿ:

ಈ ಹುದ್ದೆಗೆ ಭರ್ತಿ ಮಾಡುವ ಅಭ್ಯರ್ಥಿ ಇಂಜಿನಿಯರಿಂಗ್ ಹಿನ್ನಲೆಯನ್ನು ಹೊಂದಿದ್ದು ದೀರ್ಘಾವಧಿಯ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರಬೇಕು. ಅಭ್ಯರ್ಥಿಯು ಮುಖ್ಯ ಇಂಜಿನಿಯರ್ ಆಗಿ ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಅಥವಾ ಸರ್ಕಾರದ ಅಧೀನ ವಿಭಾಗಗಳಲ್ಲಿ 5 ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಿದವರಾಗಿರಬೇಕು. ಅವರು ಮುಖ್ಯ ಇಂಜಿನಿಯರ್ ಆಗಿ ರೂ.100 ಕೋಟಿಗಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ಕೈಗೊಂಡು ಕೆಲಸ ಮಾಡಿರಬೇಕು.

ಮುಖ್ಯ ಹಣಕಾಸು ಅಧಿಕಾರಿ :

ಅಭ್ಯರ್ಥಿಯು ಹಣಕಾಸು / ಆರ್ಥಿಕ / ಲೆಕ್ಕ ವಿಭಾಗದಲ್ಲಿ ಹಣಕಾಸಿಗೆ ಸಂಬಂಧಿಸದ ಕೆಲಸಕಾರ್ಯಗಳಲ್ಲಿ ಸಂಪೂರ್ಣ ಜ್ಞಾನ ಹೊಂದಿ ಸೇವೆ ಸಲ್ಲಿಸಿದ ದೀರ್ಘ ಅನುಭವುಳ್ಳವರಾಗಿರಬೇಕು. ಅಭ್ಯರ್ಥಿಯು ಸರ್ಕಾರಿ ಸಂಸ್ಥೆ / ಸರ್ಕಾರದ ಅಧೀನದಲ್ಲಿ ಮುಖ್ಯ ಲೆಕ್ಕಾಧಿಕಾರಿಗೆ ಸರಿಸಮಾನ ಹುದ್ದೆಯಲ್ಲಿ ಸೇವೆ ಸಲ್ಲಿಸಿದ 3 ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಅನುಭವ ಹೊಂದಿರಬೇಕು.

ಮುಖ್ಯ ಆಡಳಿತಾತ್ಮಕ ಅಧಿಕಾರಿ :

ಅಭ್ಯರ್ಥಿಯು ಪದವೀಧರರಾಗಿದ್ದು ಆಡಳಿತಾತ್ಮಕ ವಿಷಯಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳ ಕಾರ್ಯ ರೀತಿಯಲ್ಲಿ ಒಳ್ಳೆ ಪರಿಣಿತಿಯನ್ನು ಹೊಂದಿರಬೇಕು. ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರದಲ್ಲಿ ಪ್ರಥಮ ದರ್ಜೆ ಅಧಿಕಾರಿಯಾಗಿ ಅನುಭವವಿರುವ ನಿವೃತ್ತಿ ಅಧಿಕಾರಿಗೆ ಆದ್ಯತೆ ನೀಡಲಾಗುವುದು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಸಹಾಯಕ ಕಾರ್ಯನಿರ್ವಾಹಕ :

ಅಭ್ಯರ್ಥಿಯು ಪದವೀಧರರಾಗಿದ್ದು, ಸಂಬಂಧಿಸಿದ ಕೆಲಸಕಾರ್ಯದಲ್ಲಿ 2 ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಅನುಭವ ಹೊಂದಿರಬೇಕು. ಅಭ್ಯರ್ಥಿಯು ಇಂಗ್ಲೀಷ್ ಮತ್ತು ಕನ್ನಡ ಭಾಷೆಯ ಜ್ಞಾನ ಹೊಂದಿರಬೇಕು. ಅಭ್ಯರ್ಥಿಯು ಅಗತ್ಯವಿರುವ ಕೌಶಲಗಳಾದ ಶೀಘ್ರಲಿಪಿ ಮತ್ತು ಬೆರಳಚ್ಚು ಮಾಡುವಂತಹವರಾಗಿರಬೇಕು. ಆಸಕ್ತಿಯುಳ್ಳ ವ್ಯಕ್ತಿಗಳು ತಮ್ಮ ವ್ಯಾಸಂಗದ ಸ್ವವಿವರವನ್ನು ಅಗತ್ಯವಿರುವ ದಾಖಲಾತಿಗಳೊಂದಿಗೆ ಮತ್ತು ಸಾರಾಂಶವಿರುವ ಅರ್ಜಿ ನಮೂನೆಯನ್ನು ವೆಬ್ ಸೈಟ್ www.kiadb.in ನ md.tmtp@gmail.com ಗೆ 3ನೇ ಏಪ್ರಿಲ್, 2017ರಂದು 5 ಗಂಟೆಯೊಳಗೆ ಸಲ್ಲಿಸುವುದಾಗಿದೆ. ಹಾಳೆ / ಕಾಗದದ ಮೇಲೆ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಸ್ವೀಕರಿಸುವುದಿಲ್ಲ / ಪುರಸ್ಕರಿಸುವುದಿಲ್ಲ. ಕೊನೆ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

ಕ್ರಮ ಸಂಖ್ಯೆ ಸುತ್ತೋಲೆ ನೋಟ ಡೌನ್ ಲೋಡ್ ಮಾಡಿ
1. ಸಾರಾಂಶವುಳ್ಳ ಅರ್ಜಿ ನಮೂನೆ

2. ಟಿ.ಎಂ.ಟಿ.ಪಿ –ತುಮಕೂರು