- ರೂ.15 ಕೋಟಿಗೆ ಮೇಲ್ಪಟ್ಟ ಮತ್ತು ರೂ.500 ಕೋಟಿವರಗೆ ಯೋಜನೆಗಳನ್ನು ರಾಜ್ಯಮಟ್ಟದ ಏಕಗವಾಕ್ಷ ತೀರುವಳಿ SLSWCC ಸಮಿತಿಯೆದುರು ಮಂಡಿಸಲಾಗುವುದು.
- ರೂ.500 ಕೋಟಿಗೆ ಮೇಲ್ಪಟ್ಟ ಯೋಜನೆಗಳನ್ನು ರಾಜ್ಯ ಉನ್ನತ- ಉಚ್ಛ ಮಟ್ಟದ ಏಕಗವಾಕ್ಷ ತೀರುವಳಿ ಸಮಿತಿಯೆದುರು ಮಂಡಿಸಲಾಗುವುದು.
ಕ್ರಮ ಸಂಖ್ಯೆ | ಸಮಿತಿ | ಉದ್ದೇಶಗಳು |
---|---|---|
1 | ರಾಜ್ಯಮಟ್ಟದ ಉಚ್ಛ ತೀರುವಳಿ ಸಮಿತಿಯ ಅಧ್ಯಕ್ಷತೆಯನ್ನು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರು ವಹಿಸುವರು. | ಉದ್ಯಮಿಗಳಿಂದ ರೂ.100-00ಕೋಟಿಗೆ ಮೇಲ್ಪಟ್ಟು ಬಂಡವಾಳ ಹೂಡಿ ರಾಜ್ಯದಲ್ಲಿ ಉದ್ಯಮ ಮತ್ತು ಇತರೆ ಯೋಜನೆಗಳನ್ನು ಸ್ಥಾಪಿಸಲು ಪಡೆದ ಪ್ರಸ್ತಾವನೆಗಳನ್ನು ಪರೀಕ್ಷಿಸುವುದು ಮತ್ತು ಪರಿಗಣಿಸುವುದು. |
2 | ರಾಜ್ಯಮಟ್ಟದ ಏಕಗವಾಕ್ಷ ತೀರುವಳಿ ಸಮಿತಿಯ ಅಧ್ಯಕ್ಷತೆಯನ್ನು ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರು ವಹಿಸುವರು. | ರೂ.15 ಕೋಟಿಗೆ ಮೇಲ್ಪಟ್ಟ ಮತ್ತು ರೂ.100-00 ಕೋಟಿಗಿಂತ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳನ್ನು ಪರೀಕ್ಷಿಸುವುದು ಮತ್ತು ಪರಿಗಣಿಸುವುದು. |
3 | ಜಿಲ್ಲಾ ಮಟ್ಟದ ಏಕಗವಾಕ್ಷ ತೀರುವಳಿ ಸಮಿತಿಯ ಅಧ್ಯಕ್ಷತೆಯನ್ನು ಆಯಾ ಜಿಲ್ಲೆಯ ಉಪ ಆಯುಕ್ತರು ವಹಿಸುವರು. | MSME ಉದ್ಯಮಿಗಳಿಂದ ಸ್ವೀಕರಿಸಿದ ಔದ್ಯಮಿಕ ಯೋಜನೆಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಪರೀಕ್ಷಿಸುವುದು ಮತ್ತು ಪರಿಗಣಿಸುವುದು. |
4 | ಹಂಚಿಕೆ ಸಮಿತಿಯ ಅಧ್ಯಕ್ಷತೆಯನ್ನು KIADB ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯರು ವಹಿಸುವರು. | ಬೆಂಗಳೂರು ನಗರ ಜಿಲ್ಲಾ ಪ್ರದೇಶದಲ್ಲಿ 1.00 ಎಕರೆವರೆಗೆ ಭೂಪ್ರದೇಶ ಹಂಚಿಕೆ ಮಾಡುವುದು ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ 2.00 ಎಕರೆ ಭೂಪ್ರದೇಶವನ್ನು (MSME ಉದ್ಯಮಗಳಿಗೆ) ರೂ.15-00 ಕೋಟಿಯಷ್ಟು ಎಲ್ಲಾ ಕ್ಷೇತ್ರಗಳಲ್ಲಿನ ಬಂಡವಾಳ ಹೂಡಿಕೆದಾರರಿಗೆ ಹಂಚುವುದು. |
ಕೈಗಾರಿಕೆಗಳ ವಿಭಾಗಕ್ಕೆ
ಕ್ರಮ ಸಂಖ್ಯೆ | ವಿವರ |
---|---|
(a) |
ಅನುಮೋದನೆಯ ನಂತರ ನಿಗದಿತ ನಮೂನೆಯಲ್ಲಿ ಭೂಪ್ರದೇಶದ ಹಂಚಿಕೆಗಾಗಿ KIADB ಮುಖ್ಯ ಕಚೇರಿಯಲ್ಲಿ ಬೆಂಗಳೂರು ಇಲ್ಲಿ ಭರ್ತಿ ಮಾಡಿ (ಬೆಂಗಳೂರು ನಗರ,ಬೆಂಗಳೂರು ಗ್ರಾಮೀಣ ಮತ್ತು ರಾಮನಗರಂ ಜಿಲ್ಲೆ ಅಥವಾ ಅದಕ್ಕೆ ಸಂಬಂಧಿಸಿದ ವಲಯ ಕಚೇರಿಗಳಲ್ಲಿ ಕೈಗಾರಿಕೋದ್ಯಮದ ಪ್ರದೇಶಕ್ಕೆ ಅನುಗುಣವಾಗಿ ಸಲ್ಲಿಸುವುದಾಗಿದೆ.ನಿಗದಿತ ಅರ್ಜಿ ನಮೂನೆಯನ್ನು KIADB ಮುಖ್ಯ ಕಚೇರಿ/KIADB ವಲಯ ಕಚೇರಿ/ಜಿಲ್ಲಾ ಕೈಗಾರಿಕೋದ್ಯಮ ಕೇಂದ್ರಗಳಿಂದ ರೂ.250-00 ಸಂದಾಯ ಮಾಡಿ ಪಡೆಯಬಹುದಾಗಿದೆ.ಭೂ ಪ್ರದೇಶದ ಹಂಚಿಕೆಗಾಗಿ ಅರ್ಜಿ ನಮೂನೆಗಳನ್ನು ಈ ಕೆಳಕಂಡ ಲಗತ್ತುಗಳೊಂದಿಗೆ ದ್ವಿಪ್ರತಿಯಲ್ಲಿ ಸಲ್ಲಿಸುವುದಾಗಿದೆ. ದಾಖಲೆಗಳ ಪಟ್ಟಿ
|
(b) |
|
ಪಿ1-ಅರ್ಜಿಯ ಪ್ರಕ್ರಿಯೆ
ಪಿ2-ಹಂಚಿಕೆ ಪತ್ರ ಮತ್ತು ಸ್ವಾಧೀನ ಪತ್ರ ನೀಡುವಿಕೆ
ಪಿ3-ಭೋಗ್ಯ ಮತ್ತು ಕ್ರಯಪತ್ರ ಜಾರಿಪಡಿಸುವಿಕೆ
ಕ್ರಮ ಸಂಖ್ಯೆ | ಕಾಲಾವಧಿಯ ಅಂತರ | ಕೆಲಸದ ದಿನಗಳು |
---|---|---|
1 | ಅರ್ಜಿಯೊಂದಿಗೆ (ಭೂಪ್ರದೇಶದ ಶೇಕಡ 30%/20%/10% ರಷ್ಟು) ಮೊದಲು ಠೇವಣಿಯನ್ನು ಸಲ್ಲಿಸಬೇಕು. | ತಿಳಿಸಿದ 30ದಿನಗಳ ಒಳಗಾಗಿ |
2 | ಭೂಪ್ರದೇಶದ ಶೇಕಡ 70% ಮೌಲ್ಯವನ್ನು ಪಾವತಿಸಬೇಕು. | ಹಂಚಿಕೆ ಪತ್ರದ 90 ದಿನಗಳಲ್ಲಿ |
ಭೂಪ್ರದೇಶದ 80% ಮೌಲ್ಯವನ್ನು ಪಾವತಿಸಬೇಕು | ಹಂಚಿಕೆ ಪತ್ರದ 150 ದಿನಗಳಲ್ಲಿ | |
ಭೂಪ್ರದೇಶದ 90% ಮೌಲ್ಯವನ್ನು ಪಾವತಿಸಬೇಕು | ಹಂಚಿಕೆ ಪತ್ರದ 180 ದಿನಗಳಲ್ಲಿ | |
3 | ಸ್ವಾಧೀನ ಪತ್ರ ಪಡೆಯುವಿಕೆ | ಹಂಚಿಕೆ ದೃಢೀಕರಣದ ಒಂದು ತಿಂಗಳ ನಂತರ |
4 | ಗುತ್ತಿಗೆ ಕ್ರಯ ಪತ್ರದ ಜಾರಿಗೊಳಿಸುವಿಕೆ | ಸ್ವಾಧೀನ ಪಡೆದ ಒಂದು ತಿಂಗಳ ಒಳಗಾಗಿ. |